ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ( Karnataka Cabinet Meeting ) ನಡೆಯಿತು. ಇಂದಿನ ಸಭೆಯಲ್ಲಿ ಕುರಿಗಾಯಿಗಳಿಗೆ ಸಹಾಯಧನ, ಕ್ರೀಡಾಪಟುಗಳಿಗೆ ಉದ್ಯೋಗ ನೇಮಕಾತಿ ಮೀಸಲಾತಿ ಸೇರಿದಂತೆ ವಿವಿಧ ಮಹತ್ವದ ನಿರ್ಣಯಗಳಿಗೆ ಒಪ್ಪಿಗೆ ಸೂಚಿಸಲಾಗಿದೆ. ಆ ಬಗ್ಗೆ ಮುಂದೆ ಓದಿ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದಂತ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿಯವರು, ಕುರಿಗಾಹಿಗಳಿಗೆ 1.70 ಸಾವಿರ ಸಹಾಯಧನ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಅಮೃತ ಸ್ವಾಭಿಮಾನ ಯೋಜನೆ ಅನುಷ್ಠಾನಕ್ಕಾಗಿ 92 ಕೋಟಿ ಸಹಾಯಧನವನ್ನ ಘೋಷಿಸಿಲಾಗಿದೆ. ಪ್ರತಿ ಕುರಿಗಾಗಿಗೆ 20 ಕುರಿ ಸಾಕಲು ಅವಕಾಶ ನೀಡಲಾಗುತ್ತದೆ ಎಂದರು.
Gujarat Results: ಕರ್ನಾಟಕದಲ್ಲಿ ‘ಮೋದಿ ಮ್ಯಾಜಿಕ್’ ವರ್ಕ್ ಆಗಲ್ಲ: ಗುಜರಾತ್ ಫಲಿತಾಂಶ ಬಿಜೆಪಿ ಸಾಧನೆಯೂ ಅಲ್ಲ – HDK
ನಾಗರೀಕ ಸೇವೆ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಸಮ್ಮತಿ ನೀಡಲಾಗಿದೆ. ಒಲಂಪಿಕ್, ಪ್ಯಾರಾಲಂಪಿಕ್ ಪದಕ ಪಡೆದವರಿಗೆ ಸರ್ಕಾರಿ ಹುದ್ದೆ ನೀಡಲಾಗುತ್ತದೆ. ಕಾಮನ್ ವೆಲ್ತ್ ಪದಕ ಪಡೆದವರಿಗೆ ಗ್ರೂಪ್ ಎ ಹುದ್ದೆ, ಎಜುಕೇಶನ್ ಕ್ವಾಲಿಪಿಕೇಶನ್ ನಲ್ಲಿ ವಿನಾಯ್ತಿಯಿಲ್ಲ. ವಯಸ್ಸಿನಲ್ಲಿ ಇದಕ್ಕೆ ವಿನಾಯ್ತಿಯಿದೆ. ಕೆಟಗರಿ ಎ ನಲ್ಲಿ ಪದಕ ಪಡೆದವರಿಗೆ ಎಸಿ ಹುದ್ದೆ ನೀಡಲಾಗುವುದು. ನೇರವಾಗಿ ಉಪವಿಭಾಗಾಧಿಕಾರಿ ನೀಡಲಾಗುತ್ತದೆ ಎಂದು ಹೇಳಿದರು.
ಕೆಇಬಿಗೆ ಹಣಕಾಸು ಸಂಸ್ಥೆಗೆ ಸಾಲ ಪಡೆಯಲು ಖಾತರಿ ನೀಡಲಾಗಿದೆ. 3000 ಕೋಟಿ ಸಾಲ ಪಡೆಯಲು ಸರ್ಕಾರದ ಖಾತರಿ ನೀಡಲಾಗಿದೆ. ಇದಕ್ಕೆಇಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು.
ವಿದ್ಯುತ್ ಕಂಪನಿಗಳ ನಷ್ಟ ಭರಿಸಲು ನಿರ್ಧಾರ ಕೈಗೊಳ್ಳಲಾಗಿದೆ. 8064 ಕೋಟಿ ಸರ್ಕಾರದಿಂದ ಹಣಕಾಸು ನೆರವು ನೀಡಲಾಗುತ್ತದೆ. ಇಂದಿನ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಪವರ್ ಸ್ಟೋರೇಜ್ ಮಾಡಲು ಅನುದಾನ ಒದಗಿಸಲಾಗಿದೆ. ಸುಮಾರು 4000 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಸೋಲಾರ್,ವಿಂಡ್ ಪವರ್ ಬಳಕೆ ಮಾಡಿಕೊಳ್ಳುವುದು. ಇದು ಹೈಡ್ರೋ ಪವರ್ ಕಾದಿಡುವ ಯೋಜನೆಯಾಗಿದೆ. ಪಿಪಿಪಿ ಮಾಡೆಲ್ ನಲ್ಲಿ ಅನುಷ್ಠಾನಕ್ಕೆ ತರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಚನ್ನಗಿರಿ ಆಸ್ಪತ್ರೆ ಮೇಲ್ದರ್ಜೆಗೇರಿಕೆ ಮಾಡಲಾಗುತ್ತದೆ. 100 ಬೆಡ್ ನಿಂದ 250 ಬೆಡ್ ಗೆ ವಿಸ್ತರಣೆ ಮಾಡಲು 25 ಕೊಟಿ ಹಣಕಾಸು ನೆರವಿಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
‘ದೇವದಾಸಿ ಪದ್ದತಿ’ಯ ನಿರ್ಮೂಲನಕ್ಕೆ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನ – ಸಚಿವ ಹಾಲಪ್ಪ ಆಚಾರ್
ಅಜಾದಿಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ 42 ಕೈದಿಗಳ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುತ್ತಿದೆ. ಗೃಹ ಮಂಡಳಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. 20 ಕೋಟಿ ವೆಚ್ಚದಲ್ಲಿ ಸೂರ್ಯನಗರದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಸೂರ್ಯನಗರದಲ್ಲಿ ರಾಜಕಾಲುವೆ ನಿರ್ಮಾಣಕ್ಕಾಗಿ 12 ಕೋಟಿ ರೂ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಸತ್ತೂರು ಗ್ರಾಮದಲ್ಲಿ ವಸತಿ ಯೋಜನೆಗಾಗಿ 258 ಎಕರೆಯಲ್ಲಿ ನಿವೇಶನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ನಾರಾಯಣಪುರ ಉಪಕಾಲುವೆ ನಿರ್ಮಾಣ, ದೇವದುರ್ಗದ ಬಳಿ ಆರು ಕಾಲುವೆ ನಿರ್ಮಾಣಕ್ಕಾಗಿ 253 ಕೋಟಿ ವೆಚ್ಚಕ್ಕೆ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.
ಸೇಡಂ ಚಿಂಚೋಳಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗಾಗಿ 13.82 ಕೋಟಿ ಅನುದಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ತುಂಗಾ ನದಿಗೆ ಹೊಸ ಸೇತುವೆ ನಿರ್ಮಾಣಕ್ಕೆ 25.6 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ತಿಮ್ಮಸಂದ್ರ ಗ್ರಾಮದಲ್ಲಿ 7 ಎಕರೆ ಭೂಮಿ ನೀಡಿಕೆ. ಲಾನ್ ಟೆನಿಸ್ ಅಸೋಸಿಯೇಷನ್ ಗೆ ಭೂಮಿ ನೀಡಿಕೆ. ಹಿರೆಮಗಳೂರಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಗೆ ಭೂಮಿ ನೀಡಲಾಗುತ್ತಿದೆ. ಶೈಕ್ಷಣಿಕ ಉದ್ದೇಶಕ್ಕಾಗಿ 7 ಎಕರೆ ಭೂಮಿ ಕೊಟ್ಟಿದ್ದೇವೆ. ಕಾರ್ಕಳದ ಬಳಿ ದೇಗುಲ ನಿರ್ಮಾಣಕ್ಕೆ 13 ಕೋಟಿ ನೀಡಲಾಗುತ್ತಿದೆ ಎಂದರು.
BIGG NEWS : ರಾಜ್ಯದ 43 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ : ಸಚಿವ ಸಂಪುಟ ಅನುಮೋದನೆ
ಬೋರಬಂಡ ಕಾಲುವೆಯಲ್ಲಿ 8.30 ಎಕರೆ ಭೂಮಿ ನೀಡಲಾಗುತ್ತಿದೆ. ಲಕ್ಷ್ಮಿ ವೆಂಕಟೇಶ್ವರ್ ದೇಗುಲಕ್ಕೆ ಭೂಮಿ ನೀಡಲಾಗುತ್ತಿದೆ. ಹುಲಿಮಂಗಲದಲ್ಲಿ 1.36 ಎಕರೆ ಭೂಮಿ ನೀಡಿಲಾಗುತ್ತಿದೆ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಸೊನ್ನ ಗ್ರಾಮಕ್ಕೆ ನೀರು ಪೂರೈಕೆಗೆ 37 ಕೋಟಿ ಅನುದಾನ ಒದಗಿಸಲಾಗುತ್ತಿದೆ. ವಿವಿಪುರ ಇತರ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗೆ 36 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ. ಹಂದಿಹಾಳ್, ಮೀನಹಳ್ಳಿ ಯೋಜನೆಗೆ 47 ಕೋಟಿ, ಕುಡಿಯುವ ನೀರು ಪೂರೈಕೆಗೆ ಹಣ ನೀಡಿಕೆ ಮಾಡಲಾಗುತ್ತಿದೆ ಎಂದರು.
ಸಾರಿಗೆ ಸಂಸ್ಥೆ ಅಧಿಕಾರಿಗಳ ಹಂಚಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಗ್ರೇಡ್ 1 ಹುದ್ದೆಗಳನ್ನ ಸಾಮಾನ್ಯವಾಗಿಡಲಾಗುತ್ತದೆ. ಉಳಿದ ಜೂನಿಯರ್ ಹುದ್ದೆ ನಾಲ್ಕು ಸಂಸ್ಥೆಗೆ ನೀಡಲಾಗುತ್ತದೆ. ಸೀನಿಯರ್ ಗ್ರೇಡ್ 1 ಅಧಿಕಾರಿ ಕೆಎಸ್ ಆರ್ಟಿಗೆ ಇರ್ತಾರೆ ಎಂದು ತಿಳಿಸಿದರು.
921 ಎಲೆಕ್ಟ್ರಿಕ್ ಬಸ್ ಖರೀದಿಗೆ ಒಪ್ಪಿಗೆ ಸೂಚಿಸಲಾಗಿದೆ. ಬಿಎಂಟಿಸಿಗೆ ಹೊಸ ಬಸ್ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಕೇಂದ್ರದ ಸಬ್ಸಿಡಿ ನೆರವಿನಲ್ಲಿಬಸ್ ಖರೀದಿ ಮಾಡಲಾಗುತ್ತಿರುವುದಾಗಿ ಹೇಳಿದರು.
ಕನಕಭವನದ ನಿರ್ವಹಣೆ ಹೊಣೆ ಕನಕಗುರಪೀಠಕ್ಕೆ ನೀಡಿಕೆ ಮಾಡಲಾಗುತ್ತಿದೆ. 900 ಚದರ ಮೀಟರ ವಿಸ್ತೀರ್ಣದ ಹೊಣೆಗಾರಿಕೆ ನೀಡಲಾಗುವುದು ಎಂದು ತಿಳಿಸಿದರು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗಾಗಿ 23 ಸಾವಿರ ಪರಿಷ್ಕೃತ ಯೋಜನೆಗೆ ಸಮ್ಮತಿ ನೀಡಲಾಗಿದೆ. ಯೋಜನೆ ಶುರುವಾದಾಗ 15 ಸಾವಿರ ಕೋಟಿ ಅಂದಾಜಿಸಲಾಗಿತ್ತು. ಈಗ 23 ಸಾವಿರ ಕೋಟಿಗೆ ಬಂದು ನಿಂತಿದೆ, ಶೇ.99 ಟೆಂಡರ್ ಗಳು ಹೀಗಾಗಲೇ ನೀಡಲಾಗಿದೆ ಎಂದರು.
‘ದೇವದಾಸಿ ಪದ್ದತಿ’ಯ ನಿರ್ಮೂಲನಕ್ಕೆ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನ – ಸಚಿವ ಹಾಲಪ್ಪ ಆಚಾರ್
ಬಳ್ಳಾರಿ ವಿಮ್ಸ್ ಗೆ 108 ಕೋಟಿ ಅನುದಾನ ನೀಡಲಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 2 ನೇ ಹಂತಕ್ಕೆ ಹಣಕಾಸು ವೆಚ್ಚ ಒಪ್ಪಿಗೆ ನೀಡಲಾಗಿದೆ. ಯುವ ಕರಡು ನೀತಿಗೆ ಅನುಮೋದನೆ ನೀಡಲಾಗಿದೆ. 200 ಹೆಚ್ಚುವರಿ ಹಾಸಿಗೆ ನಿರ್ಮಾಣಕ್ಕೆ ಅನುಮೋದನೆ ಸೂಚಿಸಲಾಗಿದೆ ಎಂದರು.
ಯಲಬುರ್ಗಾದಲ್ಲಿ ನೂತನ ನ್ಯಾಯಾಲಯವನ್ನು 15 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಬೆಳಗಾವಿ, ಧಾರವಾಡ, ಕಲಬುರಗಿಯಲ್ಲಿ 1000 ಬೆಡ್ ಇರುವ ಹಾಸ್ಟೆಲ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದರು.
ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಮೊಕದ್ದಮ್ಮೆ ರದ್ಧು ಮಾಡಲಾಗುತ್ತದೆ. 41 ಪ್ರಕರಣಗಳನ್ನ ವಾಪಸ್ ಪಡೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಹೈಕೋರ್ಟ್ ಅನುಮತಿ ಪಡೆಯಲು ನಿರ್ಧಾರಿಸಲು ಇಂದಿನ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ