ಮೈಸೂರು : ಹುಣಸೂರಿನಲ್ಲಿ ಅದ್ದೂರಿ ಹನುಮ ಜಯಂತಿ ನಡೆಯುತ್ತಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.
ಮೆರವಣಿಗೆ ನಡೆಯುತ್ತಿರುವ ಸ್ಥಳದಲ್ಲಿ ಗಲ್ಲಿ ಗಲ್ಲಿಗೂ ಬ್ಯಾರಿಕೇಡ್ ಹಾಕಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹುಣಸೂರಿನಿಂದ ಬಜಾರ್ ರಸ್ತೆವರೆಗೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಅಲರ್ಟ್ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಈ ಹಿನ್ನೆಲೆ ಬಜಾರ್ ರಸ್ತೆಯ ಎಲ್ಲಾ ಅಂಗಡಿಗಳು ಬಂದ್ ಆಗಿದೆ.
ಉಚಿತ ಕಣ್ಣಿನ ಆಪರೇಷನ್, ಕನ್ನಡಕ ವಿತರಿಸುವ ಯೋಜನೆ ಜನವರಿಯಲ್ಲಿ ಚಾಲನೆ : ಸಿಎಂ ಬೊಮ್ಮಾಯಿ