ಮಂಗಳೂರು : ಕುಡುಕನೊಬ್ಬನಿಗೆ ರಸ್ತೆಯಲ್ಲಿ ಹತ್ತು ಲಕ್ಷ ಹಣ ಸಿಕ್ಕಿದ ಘಟನೆ ಮಂಗಳೂರಿನ ಪಂಪ್ ವೆಲ್ ಬಳಿ ನಡೆದಿದೆ. ಆದರೆ ವಿಷ್ಯ ಅಂದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ನ.27 ರಂದು ಮಂಗಳೂರಿನ ಪಂಪ್ ವೆಲ್ ಬಳಿ ಘಟನೆ ನಡೆದಿದ್ದು, ಮದ್ಯ ವ್ಯಸನಿಯಾಗಿದ್ದ ಶಿವರಾಜ್ ಗೆ ರಸ್ತೆಯಲ್ಲಿ 10 ಲಕ್ಷ ಇರುವ ಹಣದ ಕಂತೆ ಸಿಕ್ಕಿದೆ. ನಂತರ ಆತ ಅದರಲ್ಲಿ ಒಂದು ನೋಟು ತೆಗೆದು ಮತ್ತೆ ಬಾರ್ ಗೆ ಕುಡಿಯಲು ಹೋಗಿದ್ದಾನೆ, ಅಲ್ಲದೇ ಜೊತೆಗಿದ್ದವನಿಗೂ ಒಂದು ನೋಟು ಕೊಟ್ಟಿದ್ದಾನೆ.
ಅದು ಹೇಗೂ ಈ ವಿಷಯ ಪೊಲೀಸರಿಗೆ ತಿಳಿದಿದ್ದು, ಪೊಲೀಸರು ಬಂದು ಶಿವರಾಜ್ ನನ್ನು ಹಣದ ಸಮೇತ ಕರೆದುಕೊಂಡು ಹೋಗಿದ್ದಾರೆ, ಆದರೆ ಯಾವುದೇ ಪ್ರಕರಣ ದಾಖಲಿಸಲದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ, ಅಲ್ಲದೇ ಹಣದ ವಾರಸುದಾರ ಕೂಡ ಈ ಬಗ್ಗೆ ದೂರು ನೀಡಿಲ್ಲ.
ನಾವು ಹಣವನ್ನು ವಾರಸುದಾರರಿಗೆ ಕೊಟ್ಟಿದ್ದೇವೆ ಎಂದು ಪೊಲೀಸರು ಹೇಳುತ್ತಿದ್ದರೆ, ಇನ್ನೂ ಶಿವರಾಜ್ ನಾನು ಅಲ್ಲೇ ಇದ್ದೆ, ಪೊಲೀಸರು ಹಣ ಕೊಟ್ಟ ಬಗ್ಗೆ ನನಗೆ ಗೊತ್ತಾಗಿಲ್ಲ ಎಂದು ಹೇಳ್ತಿದ್ದಾನೆ. ಘಟನೆ ಹಿಂದೆ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಹಣ ಎಲ್ಲಿ ಹೋಯಿತು ಎಂಬ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ, ಇನ್ನೂ, ಪೊಲೀಸರೇ ಹಣ ನುಂಗಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದ್ದು, ತನಿಖೆಯಿಂದಲೇ ಸತ್ಯ ಬಯಲಾಗಬೇಕಿದೆ.