ಬೆಳಗಾವಿ : ಬೆಳಗಾವಿ ಗಡಿಗೆ ನುಗ್ಗಲು ಪುಂಡರು ಯತ್ನಿಸಿದ ಹಿನ್ನೆಲೆ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಪ್ಪಾಣಿಯ ಕೋಗನೋಹಳ್ಳಿ ಚೆಕ್ ಪೋಸ್ಟ್ ಬಳಿ ಉದ್ವಿಗ್ಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಳಗಾವಿ ಗಡಿಗೆ ನುಗ್ಗಲು ಪುಂಡರು ಯತ್ನಿಸಿದ ಹಿನ್ನೆಲೆ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಶಿವನೇನೆ ಕಾರ್ಯಕರ್ತರು ಪುಣೆಯ ಡಿಪೋದಲ್ಲಿದ್ದ 8 KSRTC ಬಸ್ ಗಳ ಗಾಜುಗಳನ್ನು ಪುಡಿ ಮಾಡಿದ್ದಾರೆ. ಅಲ್ಲದೇ ಬಸ್ ಗಳ ಮೇಲೆ ಮಸಿ ಬಳಿದು ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟ ಮೆರೆದಿದ್ದಾರೆ. ಈ ಶಿವಸೇನೆ ಕಾರ್ಯಕರ್ತರು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಬಳಿಕ ಪೊಲೀಸರು ವಶಕ್ಕೆ ಪಡೆದು ವಾಪಸ್ ಕಳುಸಿದ್ದಾರೆ.
ಬೆಳಗಾವಿಯ ಹಿರೇಬಾಗೇವಾಡಿ ಬಳಿಯ ಹೆದ್ದಾರಿಯಲ್ಲಿ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ವಿರುದ್ಧ ಘೋಷಣೆ ಕೂಗಿ, ಮಹಾರಾಷ್ಟ್ರದಿಂದ ಬರುತ್ತಿರುವ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕೆಲವೊಂದು ಲಾರಿಗಳ ಮೇಲೆ ಕಪ್ಪು ಮಸಿ ಬಳಿದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಕರ್ನಾಟಕದ ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಭೇಟಿ ನೀಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೊಚ್ಚಿಗೆದಿದ್ದು, ಬೆಳಗಾವಿ ನಮ್ಮದು. ಎಂದು ಘೋಷಣೆ ಕೂಗುತ್ತ ಮಹಾರಾಷ್ಟ್ರದ 5 ಲಾರಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು.
BIGG NEWS: ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಭೇಟಿ ನೀಡಲು ಅವಕಾಶ ಕೋರಿ ಡಿಸಿ ಕಚೇರಿಗೆ ಬಂದ ಎಂಇಎಸ್ ಪುಂಡರು ವಶಕ್ಕೆ