ಸುರತ್ಕಲ್ : ಚೊಕ್ಕಬಿಟ್ಟು ಎಂಬಲ್ಲಿ ಮನೆ ಮುಂದೆ ನಿಂತುಕೊಂಡಿದ್ದ ಮಗುವನ್ನು ಅಪರಿಚಿತ ವ್ಯಕ್ತಿಯೋರ್ವ ಅಪಹರಿಸಲು ಯತ್ನಿಸಿದ ದುರಂತ ಘಟನೆ ಡಿ 05 ರ ರಾತ್ರಿ ನಡೆದಿದ್ದು ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಇದೀಗ ಪ್ರಕರಣ ಕೂಡ ದಾಖಲಿಸಲಾಗಿದೆ
ನಿನ್ನೆ ರಾತ್ರಿ ಪರಿಸರದಲ್ಲಿ ವಿದ್ಯುತ್ ಕಡಿತಗೊಂಡಿದ್ದು ಈ ವೇಳೆ ಚೊಕ್ಕಬೆಟ್ಟು ಮಸೀದಿ ಪಕ್ಕದ ಮನೆಯ ಮುಂದೆ ಮಗುವೊಂದು ಆಟವಾಡುತ್ತಿತ್ತು, ಇದೇ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಮಗುವಿನ ಕೈ ಹಿಡಿದು ಎಳೆದು ಅಪಹರಣಕ್ಕೆ ಯತ್ನಿಸಿದ್ದು ಮಗು ಆತನ ಕೈಯಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.