ಬೆಂಗಳೂರು : ಯಾವುದೇ ಕಾರಣಕ್ಕೂ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿಗೆ ಅವಕಾಶ ನೀಡೋದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರ್ ಅಶೋಕ್ ಯಾವುದೇ ಕಾರಣಕ್ಕೂ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿಗೆ ಅವಕಾಶ ನೀಡೋದಿಲ್ಲ, ಮಹಾಜನ್ ವರದಿ ಎಂದು ಸುಪ್ರೀಂ ಹೇಳಿದೆ, ದಾಖಲೆ ಜನಾಭಿಪ್ರಾಯ ಎಲ್ಲಾ ನಮ್ಮ ಕಡೆ ಇದೆ, ನೆಲ ಜಲ ಭಾಷೆ ವಿಚಾರ ಬಂದಾಗ ನಾವು ಬದ್ದ, ಸಚಿವರ ಭೇಟಿಗೆ ಪ್ರತಿಯಾಗಿ ನಾವು ರಣತಂತ್ರ ಮಾಡುತ್ತೇವೆ, ಮಹಾರಾಷ್ಟ್ರ ಸಚಿವರು ಸ್ಟಂಟ್ ಮಾಸ್ಟರ್ಸ್ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಇದರ ನಡುವೆ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ರದ್ದಾಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಸಚಿವರ ಭೇಟಿ ವಿರೋಧಿಸಿ ಬೆಳಗಾವಿಯಲ್ಲಿ ಭಾರೀ ಪ್ರತಿಭಟನೆ ನಡೆದಿದೆ.
BIGG NEWS : ‘NEP’ ಜಾರಿ ವಿರೋಧಿಸಿ ಡಿ.17 ರಂದು ರಾಜ್ಯದ ವಿಶ್ವವಿದ್ಯಾಲಯ ಬಂದ್ ಗೆ ‘NSUI’ ಕರೆ
ವಾಹನ ಸವಾರರಿಗೆ ಗುಡ್ ನ್ಯೂಸ್ ; ಈಗ ಆರ್ ಸಿ, ಲೈಸೆನ್ಸ್ ಬೇಡ, ಇದೊಂದೇ ಸಾಕು.!