ಕೋಲಾರ: ಜಿಲ್ಲೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಕಾರ್ಯಕರ್ತರ ಸಭೆಯಲ್ಲಿ ಕೆ.ಎಚ್ ಮುನಿಯಪ್ಪ ಹೈಡ್ರಾಮಾ ಮಾಡಿದ್ದಾರೆ.
HEALTH TIPS: ಹೊಟ್ಟೆಯ ಕ್ಯಾನ್ಸರ್ ಬಳಲುತ್ತೀದ್ದೀರಾ? ಹಾಗಾದ್ರೆ ಇಲ್ಲಿದೆ ಕೆಲ ಟಿಪ್ಸ್ಗಳು
ಕಾಂಗ್ರೆಸ್ ಕಚೇರಿಯಲ್ಲಿ ಬಳಿ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಮುಂಭಾಗದಲ್ಲೇ ಕಾರ್ಯಕರ್ತರು ನೂಕಾಟ ನಡೆಸಿದ್ದಾರೆ.
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಕೂಗಾಟ ಶುರು ಮಾಡಿದರು. ಕೆ.ಎಚ್ ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
HEALTH TIPS: ಹೊಟ್ಟೆಯ ಕ್ಯಾನ್ಸರ್ ಬಳಲುತ್ತೀದ್ದೀರಾ? ಹಾಗಾದ್ರೆ ಇಲ್ಲಿದೆ ಕೆಲ ಟಿಪ್ಸ್ಗಳು
ನಿಮಿಬ್ಬರ ಜಗಳದಿಂದ ಸಿದ್ದರಾಮಯ್ಯ ಬರೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಿಮ್ಮಿಬ್ಬರ ಬಣದಿಂದ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಹಾಳಾಗ್ತಿದೆ ಎಂದು ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಏಕಾಏಕಿ ರಮೇಶ್ ಕುಮಾರ್ ಬಣದವರು ಪ್ರವೇಶ ಮಾಡುತ್ತಿದಂತೆ ಗಲಾಟೆ ಜೋರಾಗಿದೆ. ಈ ವೇಳೆ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣದ ಕಾರ್ಯಕರ್ತರು ಕಿತ್ತಾಟ ಶುರು ಮಾಡಿಕೊಂಡರು.