ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇದನ್ನ ನಿಯಂತ್ರಿಸಲು ಪೊಲೀಸ್ ಇಲಾಖೆ ನಾನಾ ಕಸರತ್ತು ನಡೆಸುತ್ತಿದ್ದಾರೆ.
ಇದೀಗ ಪೊಲೀಸ್ ಇಲಾಖೆ ಮತ್ತೊಂದು ಬದಲಾವಣೆ ತಂದಿದ್ದಾರೆ. ನಗರದಲ್ಲಿ ಬೆಳಗ್ಗೆ 8.30 ರ ನಂತರ ಶಾಲಾ ಬಸ್ಗಳ ಸಂಚಾರವನ್ನು ನಿಷೇಧಿಸಲು ನಿರ್ಧರಿಸಿದ್ದಾರೆ. ಈ ಮೂಲಕ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲಾಗುತ್ತಿದೆ. ಬೆಳಗ್ಗೆ 8.15ರ ನಂತರ ಶಾಲೆಗಳಿಗೆ ವಿದ್ಯಾರ್ಥಿಗಳನ್ನ ಇಳಿಸಿ ಜೊತೆಗೆ ಅಲ್ಲೇ ಪಾರ್ಕಿಂಗ್ ಮಾಡುವ ಶಾಲಾ ಬಸ್ಗಳಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೆ ತರಲಾಗುವುದು ಎಂದು ನೂತನ ಸಂಚಾರ ಆಯುಕ್ತ ಐಪಿಎಸ್ ಅಧಿಕಾರಿ ಎಂ.ಎ.ಸಲೀಂ ಹೇಳಿದ್ದಾರೆ.
ಬೆಳಗ್ಗೆ 8.30 ರ ನಂತರ ಯಾವುದೇ ಶಾಲಾ ವಾಹನಗಳನ್ನು ಶಾಲೆಗಳ ಬಳಿ ನಿಲ್ಲಿಸಲು ಅನುಮತಿ ಇಲ್ಲ. ನಿಲ್ಲಿಸಿದರೆ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಂಚಾರ ಪೊಲೀಸ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.