ಹುಬ್ಬಳ್ಳಿ : ರಾಜ್ಯದಲ್ಲಿ ಕೇಸರಿ ಶಾಲೆ ಆರಂಭಕ್ಕೆ ಹಿಂದೂಪರ ಸಂಘಟನೆಗಳು ಅಭಿಯಾನಕ್ಕೆ ಮುಂದಾಗಿದ್ದು, ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತ್ಯೇಕ ಕೇಸರಿ ಶಾಲೆಗಳನ್ನು ಆರಂಭಿಸುವ ಬಗ್ಗೆ ನಾನು ಮಾತನಾಡಲ್ಲ. ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ಹಿಜಾಬ್, ಹಲಾಲ್ ಕಟ್, ಅಜಾನ್ ಬಳಿಕ ರಾಜ್ಯದಲ್ಲಿ ಮತ್ತೊಂದು ಧರ್ಮ ದಂಗಲ್ ಶುರುವಾಗಿದ್ದು, ರಾಜ್ಯದಲ್ಲಿ ಮದರಸಾ ಬ್ಯಾನ್ ಮಾಡದಿದ್ದರೆ ಕೇಸರಿ ಶಾಲೆಗಳನ್ನು ಆರಂಭಿಸಬೇಕು ಎಂದು ಹಿಂದೂ ಸಂಘಟನೆಗಳು ಅಭಿಯಾನಕ್ಕೆ ಮುಂದಾಗಿವೆ.
ರಾಜ್ಯದಲ್ಲಿ ಮದರಸಾಗಳನ್ನು ನಿಷೇಧ ಮಾಡಿ ಇಲ್ಲವೇ ಕೇಸರಿ ಶಾಲೆ ಆರಂಭಿಸಿ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಮದರಸಾಗಳನ್ನು ನಿಷೇಧ ಮಾಡಲಾಗಿದೆ. ಕರ್ನಾಟಕದಲ್ಲೂ ಮದಸರಾಸಗಳನ್ನು ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಕೇಸರಿ ಶಾಲೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಸರಿ ಶಾಲೆಗಳಲ್ಲಿ ಪ್ರತ್ಯೇಕ ಪಠ್ಯ ಇರಬೇಕು. ಪಠ್ಯ ಪುಸ್ತಕಗಳಲ್ಲಿ ಹಿಂದುತ್ವದ ಹಿನ್ನೆಲೆ ಇರುವ ಪಾಠಗಳು ಜೊತೆಗೆ ಹಿಂದುತ್ವದ ಹಿನ್ನೆಲೆ ಇರುವ ಪ್ರಾಧ್ಯಾಪಕರು ಇರಬೇಕು, ಕೇಸರಿ ಕಾಲೇಜಿಗೆ ಕೇಸರಿ ಬಣ್ಣ, ಎಲ್ಲಾ ವಿದ್ಯಾರ್ಥಿಗಳು ಕೇಸರಿ ಬಣ್ಣದ ಸಮವಸ್ತ್ರ ಇರಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.
BIGG NEWS : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಉಗ್ರ ಶಾರಿಕ್ ಬಗ್ಗೆ `NIA’ಗೆ ಮತ್ತೊಂದು ಸ್ಪೋಟಕ ಮಾಹಿತಿ