ಬೆಂಗಳೂರು : ‘ಅಲೆಮಾರಿ’ ಸಮುದಾಯದ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, , ರಾಜ್ಯ ಸರ್ಕಾರ 10 ಸಾವಿರ ಮನೆ ಹಂಚಿಕೆ ಮಾಡುವ ಭರವಸೆ ನೀಡಿದೆ.
ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡ ಬಿಜೆಪಿ, ಅಲೆಮಾರಿ ಸಮುದಾಯಕ್ಕೆ ಆಯೋಗ ರಚಿಸಬೇಕೆನ್ನುವುದು ಭಾಸ್ಕರ್ದಾಸ್ ಎಕ್ಕಾರು ಅವರ ಕನಸು. ಇದನ್ನು ನನಸು ಮಾಡಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಆಯೋಗ ರಚಿಸಲು ಹೊಸ ಹೆಜ್ಜೆಯಿಟ್ಟಿದೆ. ಜೊತೆಗೆ ಈ ಸಮುದಾಯದವರಿಗೆ 10 ಸಾವಿರ ಮನೆಗಳನ್ನು ಹಂಚಿಕೆ ಮಾಡಲಿದೆ ಎಂದು ಟ್ವೀಟ್ ಮೂಲಕ ಬಿಜೆಪಿ ಮಾಹಿತಿ ಹಂಚಿಕೊಂಡಿದೆ. ವಿಧಾನಸಭೆ ಚುನಾವಣೆ ಹೊತ್ತಲ್ಲೇ ಸರ್ಕಾರ ಜನರಿಗೆ ಹಲವು ಆಶ್ವಾಸನೆಗಳನ್ನು ನೀಡುತ್ತಿದೆ.
60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕಣ್ಣಿನ ಆಪರೇಷನ್
ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕಣ್ಣಿನ ಆಪರೇಷನ್ ( Eye Operation ) ಮಾಡಿಸಲಾಗುತ್ತದೆ. ಅಲ್ಲದೇ ಉಚಿತ ಕನ್ನಡಕವನ್ನು ಕೂಡ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ರಮಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಅವರು, 96 ಕೋಟಿ ವೆಚ್ಚದ ಆಸ್ಪತ್ರೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಉತ್ತಮ ಚಿಕಿತ್ಸೆ ಸಿಗುವ ವಿಶ್ವಾಸವಿದೆ ಎಂದರು.
BIGG NEWS : ಯಾವುದೇ ಕಾರಣಕ್ಕೂ ಬೆಳಗಾವಿಗೆ `ಮಹಾ’ ಸಚಿವರು ಬರಲು ಬಿಡಲ್ಲ : ಕರವೇ ನಾರಾಯಣಗೌಡ
ಶೀಘ್ರವೇ ರಾಜ್ಯದಲ್ಲಿ 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಡಿಸೆಂಬರ್ ಕೊನೆಯ ವಾರದಲ್ಲಿ 437 ನಮ್ಮ ಕ್ಲಿನಿಕ್ ಗಳನ್ನು ರಾಜ್ಯಾಧ್ಯಂತ ಆರಂಭಿಸಲಾಗುತ್ತಿದೆ. ರಾಜ್ಯದ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕಣ್ಣಿನ ಆಪರೇಷನ್ ಹಾಗೂ ಕನ್ನಡ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಅಲೆಮಾರಿ ಸಮುದಾಯಕ್ಕೆ ಆಯೋಗ ರಚಿಸಬೇಕೆನ್ನುವುದು ಭಾಸ್ಕರ್ದಾಸ್ ಎಕ್ಕಾರು ಅವರ ಕನಸು. ಇದನ್ನು ನನಸು ಮಾಡಲು @BSBommai ಸರ್ಕಾರ ಮುಂದಾಗಿದೆ.
ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಆಯೋಗ ರಚಿಸಲು ಹೊಸ ಹೆಜ್ಜೆಯಿಟ್ಟಿದೆ. ಜೊತೆಗೆ ಈ ಸಮುದಾಯದವರಿಗೆ 10 ಸಾವಿರ ಮನೆಗಳನ್ನು ಹಂಚಿಕೆ ಮಾಡಲಿದೆ.#ಬಿಜೆಪಿಯೇಭರವಸೆ #BJPYeBharavase pic.twitter.com/NTU6ztcATI
— BJP Karnataka (@BJP4Karnataka) December 4, 2022
ರಾಜ್ಯದ 60 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್: ಸರ್ಕಾರದಿಂದಲೇ ಉಚಿತ ಕಣ್ಣಿನ ಆಪರೇಷನ್, ಕನ್ನಡಕ ವಿತರಣೆ
‘ಕುಮಾರಸ್ವಾಮಿ’ ಸಿಎಂ ಆಗಲಿ ಎಂದು ‘ಶಬರಿಮಲೆ’ ಪಾದಯಾತ್ರೆ ಕೈಗೊಂಡ ಅಭಿಮಾನಿಗಳು