ಗದಗ: ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಒಂದಾಗಿರುವಂತ ಶಿವಾನಂದ ಮಠದಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿಯೇ ಮುಂಜಾಗ್ರತಾ ಕ್ರಮವಾಗಿ ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
BIGG NEWS : ನಾಳೆ ಕನ್ನಡದ ಹಿರಿಯ ನಟ ದ್ವಾರಕೀಶ್ ಗೆ ‘ಗೌರವ ಡಾಕ್ಟರೇಟ್’ ಪ್ರದಾನ
ಗದಗದ ಶಿವಾನಂದ ಮಠದ ಆವರಣದಲ್ಲಿ ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳ ನಡುವೆ ಕಾದಾಟ ನಡೆದಿದೆ ಎನ್ನಲಾಗುತ್ತಿದೆ. ಮಠದ ಪೀಠದಿಂದ ಒತ್ತಾಯ ಪೂರ್ವಕವಾಗಿ ಕಿರಿಯ ಶ್ರೀಗಳನ್ನು ಕೆಳಗೆ ಇಳಿಸಿದ ಕಾರಣ, ಹಿರಿಯ ಹಾಗೂ ಕಿರಿಯ ಮಠಾಧೀಶರ ನಡುವೆ ಕಾದಾಟ ನಡೆದಿದೆ ಎಂದು ಹೇಳಲಾಗುತ್ತಿದೆ.
ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಪುಟ್ಟಣ್ಣ ಕಣಗಾಲ್ – ಡಾ.ಮಹೇಶ ಜೋಶಿ ಬಣ್ಣನೆ
ಇನ್ನೂ ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳ ನಡುವಿನ ಕಾದಾಟ ಭಕ್ತರಿಗೂ ತಿಳಿದು ಇಬ್ಬರೂ ಶ್ರೀಗಳ ಭಕ್ತರ ನಡುವೆಯೂ ವಾಗ್ವಾದ ನಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಪೊಲೀಸರು, ಮುನ್ನಚ್ಚರಿಕೆ ಕ್ರಮವಾಗಿ ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.