ಬೆಂಗಳೂರು : ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆದಿದ್ದು , ಈ ವಿಚಾರ ವ್ಯಾಪಕ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಸಿಟಿ ರವಿ ಮನೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಇದೀಗ ಈ ವಿಚಾರದ ಕುರಿತು ಶಾಸಕ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆದಿದ್ದೇನೆ, ಇದು ಬೈಗುಳನಾ..? ಅದು ಬೈಗುಳ ಅಲ್ಲ ಅಂದಮೇಲೆ ನಿಮಗೆ ಯಾಕೆ ಉರಿ..? ಅದು ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದು ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಹೀಗೆ ಉರಿಯುತ್ತದೆ ಎಂದು ಗೊತ್ತಾಗಿದ್ರೆ 10 ವರ್ಷದ ಹಿಂದೆಯೇ ಹೇಳುತ್ತಿದ್ದೆ, ನೀವು ಪ್ರಧಾನಿಗೆ ರಾವಣ, ನರಹಂತಕ, ಕೊಲೆಗಡುಕ ಎಂದು ಹೇಳುತ್ತೀರಾ. ಈ ಪ್ರಜಾಪ್ರಭುತ್ವದಲ್ಲಿ ಬೆದರಿಕೆ ನಡೆಯೋಲ್ಲ, ನಾನೊಬ್ಬ ಸಾಮಾನ್ಯ ರೈತನ ಮಗ, ಪಾಳೇಗಾರ ಮನೆತನದವನಲ್ಲ, ಪಾಳೇಗಾರರು ಇಂತಹ ಮನಸ್ಥಿತಿ ಬದಲಿಸಿಕೊಳ್ಳಬೇಕು ಎಂದು ಎಂಬಿ ಪಾಟೀಲ್ ವಿರುದ್ಧ ಕಿಡಿಕಾರಿದ್ದಾರೆ.
ನಿನ್ನಷ್ಟು ಶ್ರೀಮಂತ್ರಿಕ ಇಲ್ಲ ಎಂಬುದು ಗೊತ್ತು, ನಿನ್ನ ಶ್ರೀಮಂತಿಕೆ ದರ್ಪ ಇಲ್ಲಿ ನಡೆಯೋಲ್ಲ, ಕರ್ನಾಟಕ ಯಾರಪ್ಪನ ಮನೆ ಸ್ವತ್ತು ಅಲ್ಲ ಎಂದು ಚಿಕ್ಕಮಗಳೂರಿನಲ್ಲಿ ಸಿಟಿ ರವಿ ವಾಗ್ಧಾಳಿ ನಡೆಸಿದ್ದಾರೆ.ಸಿ.ಟಿ. ರವಿ ಅವರು ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ್ದು ಸರಿಯಲ್ಲ, ಸಿ.ಟಿ. ರವಿ ಸಿದ್ದರಾಮಯ್ಯ ಬಗ್ಗೆ ರಾಜಕೀಯವಾಗಿ ಮಾತನಾಡಬೇಕು. ಆದರೆ ಸಿದ್ರಾಮುಲ್ಲಾಖಾನ್ ಎಂದು ಹೇಳುವುದು ಸರಿಯಲ್ಲ. ಸಿದ್ದರಾಮೇಶ್ವರ ದೇವರಿಂದ ಸಿದ್ದರಾಮಯ್ಯ ಹೆಸರು ಬಂದಿದೆ. ಒಂದು ವೇಳೆ ನಾವು ಸಿ.ಟಿ ರವಿ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದರೆ ಅವರು ಹೊರಬರಲು ಆಗಲ್ಲ ಎಂದು ಎಂಬಿ ಪಾಟೀಲ್ ಎಚ್ಚರಿಕೆ ನೀಡಿದ್ದರು.
ಹೀಗೆ ಉರಿಯುತ್ತೆಎಂದು ಗೊತ್ತಾಗಿದ್ರೆ 10 ವರ್ಷದ ಮೊದಲೇ ಹೇಳುತ್ತಿದ್ದೆ : ಸಿದ್ದುಗೆ ಸಿ.ಟಿ ರವಿ ತಿರುಗೇಟು