ಮಂಡ್ಯ: ಇಂದು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮಾಲಾಧಾರಣೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು. ಮಾಲಾತಾರಣೆ ಬಳಿಕ ಸಾಗುತ್ತಿದ್ದಂತ ಸಂಕೀರ್ತನಾ ಯಾತ್ರೆಯ ಮಾಲಾಧಾರಿಗಳು ಜೈ ಶ್ರೀರಾಮ್ ಘೋಷಣೆಯನ್ನು ಕೂಗುತ್ತಾ ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.
BIGG NEWS : ತಾಕತ್ ಇದ್ದರೆ ಜೀವರಾಜ್ ಧರ್ಮಸ್ಥಳ, ಶೃಂಗೇರಿಗೆ ಬಂದು ಆಣೆ ಮಾಡಲಿ : ಶಾಸಕ ರಾಜೇಗೌಡ ಸವಾಲ್
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿಯ ಜಾಮೀಯಾ ಮಸೀದಿಯ ಬಳಿಯಲ್ಲಿ ಇಂದು ಹೈಡ್ರಾಮಾವೇ ನಡೆದಿದೆ. ಮಾಲಾಧಾರಿಗಳಾದಂತ ಸಾವಿರಾರು ಮಂದಿ, ಪೊಲೀಸರು ಅಳವಡಿಸಿದ್ದಂತ ಬ್ಯಾರಿಗೇಡ್ ಹಾರಿ, ಮಸೀದಿ ಒಳಗೆ ನುಗ್ಗೋದಕ್ಕೆ ಯತ್ನಿಸಿರೋ ಘಟನೆ ನಡೆದಿದೆ.
ಶೀಘ್ರವೇ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಲಿವೆ – ಗೌರವಾಧ್ಯಕ್ಷ ಆಯನೂರು ಮಂಜುನಾಥ್
ಜೈ ಶ್ರೀರಾಮ್ ಎಂಬುದಾಗಿ ಘೋಷಣೆ ಕೂಗುತ್ತಾ ಜಾಮೀಯಾ ಮಸೀದಿ ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಪರಿಸ್ಥಿತಿಯನ್ನು ಅರಿತಂತ ಪೊಲೀಸರು ಅಲರ್ಟ್ ಆಗಿ, ಮಾಲಾಧಾರಿಗಳು ಜಾಮೀಯಾ ಮಸೀದಿ ಒಳಗೆ ನುಗ್ಗುವುದನ್ನು ತಡೆದಿದ್ದಾರೆ. ಇದೀಗ ಜಾಮೀಯಾ ಮಸೀದಿಯ ಬಳಿಯಲ್ಲಿ ಬಿಗುವಿನ ವಾತಾವಣ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.