ಬೆಂಗಳೂರು: ಕಾಂಗ್ರೆಸ್ ಮಾಡಿದ ಹಗರಣಗಳ ಆರೋಪಗಳನ್ನು ಬಿಜೆಪಿ ಅದೆಷ್ಟೇ ನಿರಾಕರಿಸಿದರೂ ಕೊನೆಗೆ ಹಗರಣ ನಡೆದಿರುವುದು ಸಾಬೀತಾಗುತ್ತಲೇ ಇವೆ. ಬೋರ್ವೆಲ್ ಅಕ್ರಮದಲ್ಲಿ ಅಧಿಕಾರಿಗಳನ್ನು ಹೊಣೆ ಮಾಡಿ ಕೈ ತೊಳೆದುಕೊಳ್ಳಲು ಮುಂದಾಗಿದೆ. ಬೊಮ್ಮಾಯಿ ಅವರೇ, ನಿಮ್ಮದು ಭ್ರಷ್ಟಾಚಾರದ ಸಾಬೂನಿನಲ್ಲಿ ಸ್ನಾನ ಮಾಡುತ್ತಿರುವ ಸರ್ಕಾರವೆಂದು ಈಗಲಾದರೂ ಒಪ್ಪಿಕೊಳ್ಳಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಟ್ವಿಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ಕಾಂಗ್ರೆಸ್ ಮಾಡಿದ ಹಗರಣಗಳ ಆರೋಪಗಳನ್ನು ಬಿಜೆಪಿ ಅದೆಷ್ಟೇ ನಿರಾಕರಿಸಿದರೂ ಕೊನೆಗೆ ಹಗರಣ ನಡೆದಿರುವುದು ಸಾಬೀತಾಗುತ್ತಲೇ ಇವೆ.
ಬೋರ್ವೆಲ್ ಅಕ್ರಮದಲ್ಲಿ ಅಧಿಕಾರಿಗಳನ್ನು ಹೊಣೆ ಮಾಡಿ ಕೈ ತೊಳೆದುಕೊಳ್ಳಲು ಮುಂದಾಗಿದೆ.@BSBommai ಅವರೇ, ನಿಮ್ಮದು ಭ್ರಷ್ಟಾಚಾರದ ಸಾಬೂನಿನಲ್ಲಿ ಸ್ನಾನ ಮಾಡುತ್ತಿರುವ ಸರ್ಕಾರವೆಂದು ಈಗಲಾದರೂ ಒಪ್ಪಿಕೊಳ್ಳಿ. pic.twitter.com/SwI5C5wP4w
— Karnataka Congress (@INCKarnataka) December 4, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ಬಿಸಿಯೂಟದ ಆಹಾರದಲ್ಲಿ ಹುಳುಗಳನ್ನು ಕೊಟ್ಟಿದ್ದ ಬಿಜೆಪಿ ಸರ್ಕಾರ ಈಗ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡುತ್ತಿದೆ. ಅಂಗನವಾಡಿಗಳಿಗೆ ಅನುದಾನ ನೀಡದ ಕಾರಣಕ್ಕೆ ಈ ಅವಸ್ಥೆಯೇ? ಅಥವಾ 40% ಕಮಿಷನ್ ಕೈಚಳಕವೇ? ಕಾಂಗ್ರೆಸ್ ವಿರುದ್ಧ ನಾಲಿಗೆ ಹರಿಬಿಡಲು ಓಡೋಡಿ ಬರುವ ಸಿಎಂ & ಸಚಿವರು ತಮ್ಮ ಇಂತಹ ವೈಫಲ್ಯಗಳ ಬಗ್ಗೆ ಮೌನವೇಕೆ? ಎಂದು ಪ್ರಶ್ನಿಸಿದೆ.
ಬಿಸಿಯೂಟದ ಆಹಾರದಲ್ಲಿ ಹುಳುಗಳನ್ನು ಕೊಟ್ಟಿದ್ದ @BJP4Karnataka ಸರ್ಕಾರ ಈಗ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡುತ್ತಿದೆ.
ಅಂಗನವಾಡಿಗಳಿಗೆ ಅನುದಾನ ನೀಡದ ಕಾರಣಕ್ಕೆ ಈ ಅವಸ್ಥೆಯೇ?
ಅಥವಾ 40% ಕಮಿಷನ್ ಕೈಚಳಕವೇ?ಕಾಂಗ್ರೆಸ್ ವಿರುದ್ಧ ನಾಲಿಗೆ ಹರಿಬಿಡಲು ಓಡೋಡಿ ಬರುವ ಸಿಎಂ & ಸಚಿವರು ತಮ್ಮ ಇಂತಹ ವೈಫಲ್ಯಗಳ ಬಗ್ಗೆ ಮೌನವೇಕೆ? pic.twitter.com/8ffSCfAfJk
— Karnataka Congress (@INCKarnataka) December 4, 2022
ಲಸಿಕೆ ಹಾಗೂ ಸಿಬ್ಬಂದಿ ಕೊರತೆಯಿಂದ ಚರ್ಮಗಂಟು ರೋಗದ ನಿರ್ವಹಣೆಯಲ್ಲಿ ಸೋತಿರುವ ಬಿಜೆಪಿ ಸರ್ಕಾರ, ‘ಗೋಮಾತೆ’ ಎಂದು ಪದ ಬಳಸುವುದೇ ಹಾಸ್ಯಾಸ್ಪದ. ಪಶು ವೈದ್ಯಕೀಯ ಕ್ಷೇತ್ರವನ್ನು ಗಟ್ಟಿಗೊಳಿಸಿ ಗೋರಕ್ಷಣೆಗೆ ಒತ್ತು ಕೊಡಬೇಕಾದ ಬಿಜೆಪಿ ಬಾಯಲ್ಲಿ ಗೋರಕ್ಷಣೆ ಎನ್ನುವುದು ಬರೀ ಬೂಟಾಟಿಕೆ. ಹುದ್ದೆ ಭರ್ತಿ ಮಾಡಲು ನಿರಾಸಕ್ತಿ ಏಕೆ? ಎಂದು ಕೇಳಿದೆ.
ಲಸಿಕೆ ಹಾಗೂ ಸಿಬ್ಬಂದಿ ಕೊರತೆಯಿಂದ ಚರ್ಮಗಂಟು ರೋಗದ ನಿರ್ವಹಣೆಯಲ್ಲಿ ಸೋತಿರುವ @BJP4Karnataka ಸರ್ಕಾರ, 'ಗೋಮಾತೆ' ಎಂದು ಪದ ಬಳಸುವುದೇ ಹಾಸ್ಯಾಸ್ಪದ.
ಪಶು ವೈದ್ಯಕೀಯ ಕ್ಷೇತ್ರವನ್ನು ಗಟ್ಟಿಗೊಳಿಸಿ ಗೋರಕ್ಷಣೆಗೆ ಒತ್ತು ಕೊಡಬೇಕಾದ ಬಿಜೆಪಿ ಬಾಯಲ್ಲಿ ಗೋರಕ್ಷಣೆ ಎನ್ನುವುದು ಬರೀ ಬೂಟಾಟಿಕೆ.
ಹುದ್ದೆ ಭರ್ತಿ ಮಾಡಲು ನಿರಾಸಕ್ತಿ ಏಕೆ? pic.twitter.com/9f7xNaOBTn
— Karnataka Congress (@INCKarnataka) December 4, 2022