ಬೆಂಗಳೂರು: ಬೆಳಗಾವಿಯಲ್ಲಿ ವೆಂಟಿಲೇಟರ್ ಸಿಗದೆ ಸಾವು, ಹಾಸನದಲ್ಲಿ ಚಿಕಿತ್ಸೆ ನಿರಾಕರಿಸಿ ಸಾವು, ಈಗ ಮಧುಗಿರಿಯಲ್ಲಿ ವೈದ್ಯರ ಕರ್ತವ್ಯಲೋಪದಿಂದ ಸಾವು. ಈ ಎಲ್ಲದಕ್ಕೂ ಬೇಜವಾಬ್ದಾರಿ ಸಚಿವ ಸುಧಾಕರ್ ನೇರ ಹೊಣೆ. ಆರೋಗ್ಯ ಇಲಾಖೆಯನ್ನು ( Health Department ) ಭ್ರಷ್ಟಾಚಾರದ ಕೊಂಪೆ ಮಾಡಿದ ಕೀರ್ತಿ ಸುಧಾಕರ್ರದ್ದು. ಜೀವ ಉಳಿಸುವ ಬದಲು ಜೀವ ತೆಗೆಯುತ್ತಿದೆ ಈ ಸರ್ಕಾರ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಟ್ವಿಟ್ಟರ್ ನಲ್ಲಿ ವಾಗ್ಧಾಳಿ ನಡೆಸಿದೆ.
ಬೆಳಗಾವಿಯಲ್ಲಿ ವೆಂಟಿಲೇಟರ್ ಸಿಗದೆ ಸಾವು,
ಹಾಸನದಲ್ಲಿ ಚಿಕಿತ್ಸೆ ನಿರಾಕರಿಸಿ ಸಾವು,
ಈಗ ಮಧುಗಿರಿಯಲ್ಲಿ ವೈದ್ಯರ ಕರ್ತವ್ಯಲೋಪದಿಂದ ಸಾವು.ಈ ಎಲ್ಲದಕ್ಕೂ ಬೇಜವಾಬ್ದಾರಿ ಸಚಿವ @mla_sudhakar ನೇರ ಹೊಣೆ.
ಆರೋಗ್ಯ ಇಲಾಖೆಯನ್ನು ಭ್ರಷ್ಟಾಚಾರದ ಕೊಂಪೆ ಮಾಡಿದ ಕೀರ್ತಿ ಸುಧಾಕರ್ರದ್ದು.ಜೀವ ಉಳಿಸುವ ಬದಲು ಜೀವ ತೆಗೆಯುತ್ತಿದೆ ಈ ಸರ್ಕಾರ. pic.twitter.com/hUZG9bPCyz
— Karnataka Congress (@INCKarnataka) December 4, 2022
ಈ ಕುರಿತಂತೆ ಟ್ವಿಟ್ ಮಾಡಿದ್ದು, ಲಸಿಕೆ ಹಾಗೂ ಸಿಬ್ಬಂದಿ ಕೊರತೆಯಿಂದ ಚರ್ಮಗಂಟು ರೋಗದ ನಿರ್ವಹಣೆಯಲ್ಲಿ ಸೋತಿರುವ ಬಿಜೆಪಿ ಸರ್ಕಾರ, ‘ಗೋಮಾತೆ’ ಎಂದು ಪದ ಬಳಸುವುದೇ ಹಾಸ್ಯಾಸ್ಪದ. ಪಶು ವೈದ್ಯಕೀಯ ಕ್ಷೇತ್ರವನ್ನು ಗಟ್ಟಿಗೊಳಿಸಿ ಗೋರಕ್ಷಣೆಗೆ ಒತ್ತು ಕೊಡಬೇಕಾದ ಬಿಜೆಪಿ ಬಾಯಲ್ಲಿ ಗೋರಕ್ಷಣೆ ಎನ್ನುವುದು ಬರೀ ಬೂಟಾಟಿಕೆ. ಹುದ್ದೆ ಭರ್ತಿ ಮಾಡಲು ನಿರಾಸಕ್ತಿ ಏಕೆ? ಎಂದು ಪ್ರಶ್ನಿಸಿದೆ.
ಲಸಿಕೆ ಹಾಗೂ ಸಿಬ್ಬಂದಿ ಕೊರತೆಯಿಂದ ಚರ್ಮಗಂಟು ರೋಗದ ನಿರ್ವಹಣೆಯಲ್ಲಿ ಸೋತಿರುವ @BJP4Karnataka ಸರ್ಕಾರ, 'ಗೋಮಾತೆ' ಎಂದು ಪದ ಬಳಸುವುದೇ ಹಾಸ್ಯಾಸ್ಪದ.
ಪಶು ವೈದ್ಯಕೀಯ ಕ್ಷೇತ್ರವನ್ನು ಗಟ್ಟಿಗೊಳಿಸಿ ಗೋರಕ್ಷಣೆಗೆ ಒತ್ತು ಕೊಡಬೇಕಾದ ಬಿಜೆಪಿ ಬಾಯಲ್ಲಿ ಗೋರಕ್ಷಣೆ ಎನ್ನುವುದು ಬರೀ ಬೂಟಾಟಿಕೆ.
ಹುದ್ದೆ ಭರ್ತಿ ಮಾಡಲು ನಿರಾಸಕ್ತಿ ಏಕೆ? pic.twitter.com/9f7xNaOBTn
— Karnataka Congress (@INCKarnataka) December 4, 2022