ಶೃಂಗೇರಿ : ಆಸ್ತಿ ಖರೀದಿಸಿ ಸರ್ಕಾರಕ್ಕೆ ತೆರಿಗೆ ಮೋಸ ಮಾಡಿದ್ದಾರೆ ಎಂಬ ಆರೋಪಕ್ಕೆ ಶೃಂಗೇರಿ ಕ್ಷೇತ್ರದ ಶಾಸಕ ಟಿ,ಡಿ ರಾಜೇಗೌಡ ಪ್ರತಿಕ್ರಿಯೆ ನೀಡಿದ್ದು, ತಾಕತ್ ಇದ್ದರೆ ಧರ್ಮಸ್ಥಳ, ಶೃಂಗೇರಿಗೆ ಬಂದು ಆಣೆ ಮಾಡಿ’ ಎಂದು ಡಿ.ಎನ್ ಜೀವರಾಜ್ ಗೆ ಶಾಸಕ ರಾಜೇಗೌಡ ಸವಾಲ್ ಹಾಕಿದ್ದಾರೆ.
ಆಸ್ತಿ ಖರೀದಿಸಿ ಸರ್ಕಾರಕ್ಕೆ ತೆರಿಗೆ ಕಟ್ಟದೇ ಮೋಸ ಮಾಡಿದ್ದಾರೆ ಎಂದು ಶಾಸಕ ಟಿ,ಡಿ ರಾಜೇಗೌಡ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜೇಗೌಡ ಕಾನೂನು ಪ್ರಕಾರ ಮಾತ್ರ ಆಸ್ತಿ ಖರೀದಿ ಮಾಡಿದ್ದೇನೆ, ನಾನು ನಂಬುವ ಧರ್ಮಸ್ಥಳಕ್ಕೆ ಹೋಗುವೆ, ತಾಕತ್ ಇದ್ದರೆ ಬಂದು ಪ್ರಮಾಣ ಮಾಡಿ ಎಂದು ಜೀವರಾಜ್ ಗೆ ಸವಾಲ್ ಹಾಕಿದ್ದಾರೆ.
ನಾನು ಅನ್ಯಾಯ ಮಾಡಿದ್ರೆ ನನಗೆ ತೊಂದರೆಯಾಗಲಿ, ಅಪಪ್ರಚಾರ ಮಾಡಿದವರನ್ನು ದೇವರೇ ನೋಡಿಕೊಳ್ಳಲಿ, ತಾಕತ್ತಿದ್ರೆ ಶೃಂಗೇರಿ ಶಾರದಾಂಬೆ ಸನ್ನಿಧಿ, ಧರ್ಮಸ್ಥಳಕ್ಕೆ ಬನ್ನಿ, ನಾನು ಪ್ರಮಾಣ ಮಾಡುತ್ತೇನೆ ನೀವು ಮಾಡಿ ಎಂದು ಸವಾಲ್ ಹಾಕಿದ್ದಾರೆ.
ಘಟನೆ ಹಿನ್ನೆಲೆ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ರಾಜೇಗೌಡ ವಿರುದ್ಧ ಅಕ್ರಮದ ಆರೋಪ ಮಾಡಿ 12 ದಿನಗಳ ಹಿಂದಷ್ಟೆ ದೂರು ನೀಡಿದ್ದ ವ್ಯಕ್ತಿ ಐದೇ ದಿನಕ್ಕೆ ದೂರು ಹಿಂಪಡೆದಿದ್ದ. ಇದೀಗ ಮತ್ತೆ ಅದೇ ಪ್ರಕರಣ ಸಂಬಂಧ ದೂರು ದಾಖಲಾಗಿದೆ.
ದೂರುದಾರ ವಿಜಯಾನಂದ ಅವರು, ತಾವು ಲೋಕಾಯುಕ್ತಕ್ಕೆ ನೀಡಿದ್ದಂತ ದೂರನ್ನು ಹಿಂಪಡೆದಿದ್ದರು. ಆದ್ರೇ ಕೇಸ್ ಯಾಕೆ ವಾಪಾಸ್ ಪಡೆಯುತ್ತಿದ್ದೇನೆ ಎಂಬುದು ತಿಳಿಸಿರಲಿಲ್ಲ. ಮತ್ತದೇ ಪ್ರಕರಣದಲ್ಲಿ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ಕೊಪ್ಪ ತಾಲೂಕಿನ ದಿನೇಶ್ ಹೊಸೂರು ಎಂಬುವರು ಮತ್ತದೇ ದೂರು ದಾಖಲಿಸಿದ್ದಾರೆ. ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ, ಶಭಾನ ರಂಜಾನ್ ಟ್ರಸ್ಟ್ ಮೂಲಕ 123 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದು, ಅದಕ್ಕೆ ಹಣ ಎಲ್ಲಿಂದ ಬಂತು ಎಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವಿಜಯಾನಂದ ಎಂಬುವರು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದರು.
ವಿಜಯಾನಂದ ದೂರಿನಲ್ಲಿ ಏನಿತ್ತು..?
ತಾನು ಈ ಹಿಂದೆ ಸಿಎಂ ರಾಜಕೀಯ ಕಾರ್ಯದರ್ಶಿ ಬಿಜೆಪಿಯ ಡಿ.ಎನ್ ಜೀವರಾಜ್ ಅವರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದೆ. ಆದ್ರೇ ಅವರು ನನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಹೊರೆಸಿ ಕೆಲಸದಿಂದ ತೆಗೆದು ಹಾಕಿದ್ದರು. ಮತ್ತೆ ಕೆಲಸ ಕೇಳಿ ವಾಪಾಸ್ ಡಿ.ಎನ್ ಜೀವರಾಜ್ ಬಳಿಗೆ ಹೋದಾಗ, ನಿರುದ್ಯೋಗಿ ಎಂಬುದಾಗಿ ಹೇಳಿದ್ದಾರೆ. ನಿರುದ್ಯೋಗಿಯಾದ ನಾನು ಮತ್ತೆ ಡಿ.ಎನ್ ಜೀವರಾಜ್ ಅವರನ್ನು ಉದ್ಯೋಗಕ್ಕಾಗಿ ವಿನಂತಿಸಿದಾಗ, ರಾಜೇಗೌಡ ಮೇಲೆ ಲೋಕಾಯುಕ್ತಕ್ಕೆ ದೂರು ಅರ್ಜಿ ಕೊಡಲು ಒಪ್ಪಿದರೇ ಮಾತ್ರ ಉದ್ಯೋಗ ಕೊಡಿಸುವು ಆಮಿಷ ಒಡ್ಡಿದರು. ನಿರುದ್ಯೋಗ, ಬದುಕಿನ ಅಭದ್ರತೆಯಿಂದ ಜೀವರಾಜ್ ಅವರ ಪೊಳ್ಳು ಆಶ್ವಾಸನೆಗೆ ಬಲಿಯಾಗಿ, ನಾನು ಟಿ.ಡಿ ರಾಜೇಗೌಡ ಅವರ ಮೇಲೆ ದೂರಿನ ಅರ್ಜಿಗೆ ಸಹಿ ಹಾಕಿದೆ. ಈ ದೂರಿನ ವಿವರಣೆಯನ್ನಾಗಲೀ, ದೂರಿನ ಪ್ರತಿಯನ್ನಾಗಲೀ ನನಗೆ ತೋರಿಸಿರುವುದಿಲ್ಲ ಎಂದಿದ್ದಾರೆ.
ನನಗೆ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಕೆಯಾದ ನಂತ್ರ, ರಾಜೇಗೌಡ ಅವರ ಬಗ್ಗೆ ದೂರು ಏನು ನೀಡಲಾಗಿದೆ ಎಂಬುದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಟಿ.ಡಿ ರಾಜೇಗೌಡ ಅವರ ಕುಟುಂಬಕ್ಕೂ, ಕಾಫಿ ನಾಡಿನ ಆರಾಧ್ಯ ವ್ಯಕ್ತಿಯಾದ ದಿವಂಗತ ಸಿದ್ಧಾರ್ಥ ಹೆಗ್ಡೆಯವರ ಕುಟುಂಬದ ಮಧ್ಯೆ ನಡೆದಿರುವ ಒಡಂಬಡಿಕೆ, ಕರಾರು ಮತ್ತು ಕಾಫಿ ತೋಟದ ವಿಕ್ರಯಕ್ಕೂ ನನಗೂ ಯಾವುದೇ ಸಂಬಂಧವಿರುವುದಿಲ್ಲ. ಜೀವರಾಜ್ ಬೀಸಿದ ಆಮಿಷದ ಬಲೆಗೆ ಬಲಿಯಾಗಿ ನಾನು ಟಿ.ಡಿ ರಾಜೇಗೌಡ ವಿರುದ್ಧದ ದೂರು ಅರ್ಜಿಗೆ ಸಹಿ ಹಾಕಿದ್ದೇನ. ನನ್ನ ದೂರನ್ನು ವಾಪಾಸ್ ಪಡೆಯುತ್ತಿರುವುದಾಗಿ ತಿಳಿಸಿದ್ದರು.
ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತಕ್ಕೆ ನೀಡಲಾಗಿದ್ದಂತ ದೂರುದಾರ ವಿಜಯಾನಂದ ದೂರು ವಾಪಾಸ್ ಪಡೆದ ಕಾರಣ, ಇದೀಗ ಬಿಜೆಪಿಗೆ ಭಾರೀ ಮುಖಭಂಗ ಉಂಟಾದಂತೆ ಆಗಿದೆ. ಅಲ್ಲದೇ ದೂರನ್ನು ವಿಜಯಾನಂದ ಅವರಿಗೆ ಆಮಿಷ ಒಡ್ಡಿ ಕೊಡಿಸಿರೋ ವಿಚಾರ ಬಟಾಬಯಲಾದಂತೆ ಆಗಿದೆ.ಅಂದಹಾಗೇ ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ವಿಜಯಾನಂದ ದೂರು ನೀಡಿದ್ದರು. ಅಲ್ಲದೇ ಈ ದೂರಿನಲ್ಲಿ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗಡೆ ಅವರ ಆಸ್ತಿಯನ್ನು ಅಕ್ರಮವಾಗಿ ಪಡೆದಿದ್ದಾರೆ ಎಂಬುದಾಗಿಯೂ ಉಲ್ಲೇಖಿಸಿದ್ದರು.
‘ಜನ ಸಂಕಲ್ಪ ಯಾತ್ರೆ’ಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ – ಸಿಎಂ ಬಸವರಾಜ ಬೊಮ್ಮಾಯಿ
BREAKING NEWS : ಜಾಮಿಯಾ ಮಸೀದಿ ಮುಂದೆ ಹನುಮ ಮಾಲಾಧಾರಿ-ಪೋಲಿಸರ ನಡುವೆ ಹೈಡ್ರಾಮ