ಕೋಲಾರ: ನಗರದಲ್ಲಿನ ಲಕ್ಷ್ಮೀಸಾಗರದ ಬಳಿಯಲ್ಲಿ ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ( MLC N Ravikumar ) ಅವರ ಕಾಲು ಬೈಕ್ ಗೆ ಡಿಕ್ಕಿಯಾಗಿ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ವಿವಿಧ ಕಾರ್ಯಕ್ರಮಗಳ ನಿಮಿತ್ತ ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಗೇಟ್ ಬಳಿಯಲ್ಲಿ ಬಿಜೆಪಿ ಎಂ ಎಲ್ ಸಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡಿದ್ದನು.
ಬೈಕ್ ಸವಾರ ಗಾಯಗೊಂಡಿದ್ದರಿಂದ ಆತನನ್ನು ಆಸ್ಪತ್ರೆಗೆ ಸೇರಿಸುವಂತೆ ಸ್ಥಳೀಯರು ಕೋರಿಕೊಂಡಿದ್ದರು. ಆದ್ರೇ ಗಾಯಾಳು ಸಾವರನನ್ನು ಆಸ್ಪತ್ರೆಗೆ ಸೇರಿಸೋದಕ್ಕೆ ಬಿಜೆಪಿ ಎಂ ಎಲ್ ಸಿ ಎನ್ ರವಿಕುಮಾರ್ ಹಿಂದೇಟು ಹಾಕಿದ್ದರು.
ಭಾರತಕ್ಕೆ ಜಿ 20 ಅಧ್ಯಕ್ಷ ಸ್ಥಾನ: ಪ್ರಧಾನಿ ಮೋದಿಯನ್ನು ಅಭಿನಂದಿಸಿದ ಫ್ರಾನ್ಸ್, ಜಪಾನ್, ಆಸ್ಟ್ರೇಲಿಯಾ ಅಧ್ಯಕ್ಷರು!
ಈ ವೇಳೆ ಅವರನ್ನು ತರಾಟೆಗೆ ತೆಗೆದುಕೊಂಡಂತ ಸಾರ್ವಜನಿಕರು, ನಿಮ್ಮದೇ ಕಾರು ಡಿಕ್ಕಿಯಾಗಿ ಬೈಕ್ ಸವಾರ ಅಪಘಾತಗೊಂಡು ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದೀರಾ ಎಂಬುದಾಗಿ ತರಾಟೆಗೆ ತೆಗೆದುಕೊಂಡರು. ನೀನು ಯಾವ ಸೀಮೆಯ ಎಂ ಎಲ್ ಸಿಯೋ ಎಂದು ವಾಗ್ಧಾಳಿ ನಡೆಸಿದಂತ ಘಟನೆಗೂ ಸಾಕ್ಷಿಯಾಗಿದೆ ಎನ್ನಲಾಗಿದೆ.