ಕೆಎನ್ಎನ್ಡಿಜಿಟಲ್ ಡೆಸ್ಕ್ : ರಾಜಸ್ಥಾನದ ಭಿಲ್ವಾರಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೇಮಿಗಳಿಬ್ಬರ ನಡುವೆ ಹುಸಿ ಮುನಿಸು ಉಂಟಾಗಿದ್ದು, ಗೆಳತಿ ತನ್ನ ಸಂಖ್ಯೆಯನ್ನ ಬ್ಲಾಕ್ ಮಾಡಿದ ಕಾರಣಕ್ಕೆ ಯುವಕ ಕೋಪದಿಂದ ಮೊಬೈಲ್ ಟವರ್ ಹತ್ತಿದ್ದಾನೆ. ಇನ್ನು ಘಟನೆಯ ವಿಡಿಯೋ ವೈರಲ್ ಆಗಿದೆ.
ಹೌದು, ಗೆಳತಿ ತನ್ನ ಸಂಖ್ಯೆಯನ್ನ ಬ್ಲಾಕ್ ಮಾಡಿದ್ದಾಳೆಂದು ಕೋಪಕೊಂಡ ಯುವಕ, ಮೊಬೈಲ್ ಟವರ್ ಹತ್ತಿದ್ದಾನೆ. ಇನ್ನೀದು ಸುದ್ದಿಯಾಗ್ತಿದಂತೆ, ಗ್ರಾಮಸ್ಥರು ಸ್ಥಳದಲ್ಲೇ ಜಮಾಯಿಸಿದ್ದಾರೆ. ಅಲ್ಲಿ ನೆರದಿದ್ದ ಜನ ನಂತ್ರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಯುವಕನ ಗೆಳತಿಯೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಿದ್ದಾರೆ. ನಂತ್ರ ಯುವಕ ಟವರ್ನಿಂದ ಕೆಳಗಿಳಿದ್ದಾನೆ. ಇನ್ನು ಯುವಕ ಇಳಿದಿದ್ದೇ ತಡ ತಕ್ಷಣ ಲಾಕ್ ಮಾಡಿದ ಪೊಲೀಸರು ಶಾಂತಿಭಂಗದ ಆರೋಪದಡಿ ಬಂಧಿಸಿದ್ದಾರೆ.
ಇದು ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಬದ್ನೋರ್ ಪಟ್ಟಣದ ಪ್ರಕರಣವಾಗಿದೆ. ಆ ಯುವಕ ಸುಮಾರು ಒಂದೂವರೆ ಗಂಟೆಗಳ ಕಾಲ ಟೆಲಿಫೋನ್ ಟವರ್ ಮೇಲಿದ್ದ ಎನ್ನಲಾಗ್ತಿದೆ. ಪೊಲೀಸರು ಅವನ ಮನವೊಲಿಸಿದ್ದು ಕೆಳಗಿಳಿಸಿ ನಂತ್ರ ಬಂಧಿಸಿದರು. ಅದೇ ಸಮಯದಲ್ಲಿ, ಹುಡುಗಿಯ ತಂದೆ ಯುವಕನು ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
‘ಮೊಸರು’ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ.? ಕೆಟ್ಟದಾ.? ತಜ್ಞರು ಹೇಳುವುದೇನು ಗೊತ್ತಾ?