ಹುಬ್ಬಳ್ಳಿ : ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿನಯ್ ಕುಲಕರ್ಣಿಗೆ 3 ಗಂಟೆ ಹುಬ್ಬಳ್ಳಿ ಭೇಟಿಗೆ ಷರತ್ತುಬದ್ದ ಅನುಮತಿ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಸಹೋದರ ಸಂಬಂಧಿ ವಿಜಯ್ ಲಕ್ಷ್ಮೀ ಪಾಟೀಲ್ ಅನಾರೋಗ್ಯ ಹಿನ್ನೆಲೆ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ಭೇಟಿ ನೀಡುವ ಸಲುವಾಗಿ ವಿನಯ್ ಕುಲಕರ್ಣಿ ಕೋರ್ಟ್ ಗೆ ಮನವಿ ಸಲ್ಲಿಸಿದರು. ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 3 ಗಂಟೆ ಹುಬ್ಬಳ್ಳಿ ಭೇಟಿಗೆ ಷರತ್ತುಬದ್ದ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಆಸ್ಪತ್ರೆ ಭೇಟಿ ಬಿಟ್ಟು ಬೇರೆ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ಕೋರ್ಟ್ ಸೂಚನೆ ನೀಡಿದೆ. ಮೂರು ದಿನ ಅನುಮತಿ ಕೋರಿದ್ದ ವಿನಯ್ ಗೆ ಕೋರ್ಟ್ ಮೂರು ಗಂಟೆಗಳ ಕಾಲ ಮಾತ್ರ ಅವಕಾಶ ನೀಡಿದೆ.
BREAKING NEWS : ಮೂಡಿಗೆರೆಯಲ್ಲಿ ಭಾರೀ ಉಪಟಳ ಕೊಟ್ಟಿದ್ದ ಮತ್ತೊಂದು ‘ಪುಂಡಾನೆ’ ಸೆರೆ