ಬೆಂಗಳೂರು: ಬ್ರೇಕ್ ಫೇಲ್ ಆಗಿದ್ದಂತ ಕಂಟೇನರ್ ನಿಂದ ಸರಣಿ ಅಪಘಾತದಿಂದಾಗಿ ( Accident ) ಹಲವು ವಾಹನಗಳು ಜಖಂಗೊಂಡು ರಾಷ್ಟ್ರೀಯ ಹೆದ್ದಾರಿ 48 ಪುಲ್ ಟ್ರಾಫಿಕ್ ಜಾಮ್ ಗೊಂಡಿರುವ ಘಟನೆ ಇಂದು ನಡೆದಿದೆ.
ಅಂಗವಿಕಲರಿಗೆ ಭರ್ಜರಿ ಗುಡ್ ನ್ಯೂಸ್: ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ, ವಸತಿ ಯೋಜನೆಯಲ್ಲಿ ಶೇ.2ರಷ್ಟು ಮೀಸಲಾತಿ
ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಬಳಿಯ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಂಟೇನರ್ ಬ್ರೇಕ್ ಫೇಲ್ ಆಗಿದೆ. ಇದರಿಂದಾಗಿ ಕಂಟೇನರ್ 3 ಗೂಡ್ಸ್ ವಾಹನ, 3 ಕಾಲು, 2 ಬೈಕ್ ಗೆ ಡಿಕ್ಕಿ ಹೊಡೆದಿದೆ.
ಇದಷ್ಟೇ ಅಲ್ಲದೇ ರಸ್ತೆ ಬದಿಯ ತಳ್ಳು ಗಾಡಿಗೂ ಗುದ್ದಿದ್ದರಿಂದ ತಳ್ಳುಗಾಡಿಯ ವ್ಯಕ್ತಿ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು, ಟ್ರಾಫಿಕ್ ಜಾಮ್ ಕ್ಲಿಯರ್ ಮಾಡುವುದಕ್ಕೆ ಹರಸಾಹಸ ಪಡುವಂತೆ ಆಯ್ತು.
‘ದ್ವಿತೀಯ PUC ಪರೀಕ್ಷಾ ಶುಲ್ಕ’ ಸಂದಾಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ದಿನಾಂಕ ವಿಸ್ತರಣೆ
ಸರಣಿ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಕಳೆದ ಅರ್ಧಗಂಟೆಯಿಂದ ಟ್ರಾಫಿಕ್ ಜಾಮ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಉಂಟಾಗಿದ್ದು, ಸಂಚಾರ ಪೊಲೀಸರು ಟ್ರಾಫಿಕ್ ಜಾಮ್ ಕ್ಲಿಯರ್ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.