ಬೆಂಗಳೂರು: ಕರ್ನಾಟಕದ ಮೇಲೆ ಮಹಾರಾಷ್ಟ್ರ ಸರ್ಕಾರಕ್ಕಿಂತ ಬೊಮ್ಮಾಯಿ ಸರ್ಕಾರವೇ ( Bommai Government ) ಹೆಚ್ಚು ಹಗೆ ಸಾಧಿಸುತ್ತಿರುವಂತಿದೆ. ಕನ್ನಡದ ನೆಲದಲ್ಲಿ ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಗೆ ಕರ್ನಾಟಕದ ಪೊಲೀಸರೇ ಥಳಿಸಿದ್ದಾರೆ, ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಪೊಲೀಸರೇ ತೆಗೆದಿದ್ದಾರೆ. ಕನ್ನಡಿಗರ ಮೇಲೆ ದೌರ್ಜನ್ಯವೆಸಗಲು ಪೊಲೀಸರಿಗೆ ಸರ್ಕಾರವೇ ನಿರ್ದೇಶಿಸಿದೆಯೇ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ಕರ್ನಾಟಕದ ಮೇಲೆ ಮಹಾರಾಷ್ಟ್ರ ಸರ್ಕಾರಕ್ಕಿಂತ @BSBommai ಸರ್ಕಾರವೇ ಹೆಚ್ಚು ಹಗೆ ಸಾಧಿಸುತ್ತಿರುವಂತಿದೆ.
ಕನ್ನಡದ ನೆಲದಲ್ಲಿ ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಗೆ ಕರ್ನಾಟಕದ ಪೊಲೀಸರೇ ಥಳಿಸಿದ್ದಾರೆ,
ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಪೊಲೀಸರೇ ತೆಗೆದಿದ್ದಾರೆ.ಕನ್ನಡಿಗರ ಮೇಲೆ ದೌರ್ಜನ್ಯವೆಸಗಲು ಪೊಲೀಸರಿಗೆ ಸರ್ಕಾರವೇ ನಿರ್ದೇಶಿಸಿದೆಯೇ? pic.twitter.com/Hi0Ad69YWR
— Karnataka Congress (@INCKarnataka) December 3, 2022
ಈ ಕುರಿತಂತೆ ಟ್ವಿಟ್ ಮಾಡಿದ್ದು, ಮಹಾರಾಷ್ಟ್ರದ ಗಡಿ ಕ್ಯಾತೆ ವಿಚಾರದಲ್ಲಿ ಏಕೆ ಎಲ್ಲಾ ಸಚಿವರ ಬಾಯಿ ಬಂದ್ ಆಗಿದೆ? ಅಲ್ಲೂ ಬಿಜೆಪಿ, ಇಲ್ಲೂ ಬಿಜೆಪಿ ಎರಡೂ ಸರ್ಕಾರಗಳು ಸೇರಿಕೊಂಡು ಕನ್ನಡಿಗರನ್ನು ವಂಚಿಸುತ್ತಿವೆ. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯವಾಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿದಿದೆ. ಅಲ್ಲೂ ನಮ್ಮದೇ ಸರ್ಕಾರ ಎಂಬ ಮಮಕಾರವೇ ಬಿಜೆಪಿಗೆ ಎಂದು ಕೇಳಿದೆ.
ಮಹಾರಾಷ್ಟ್ರದ ಗಡಿ ಕ್ಯಾತೆ ವಿಚಾರದಲ್ಲಿ ಏಕೆ ಎಲ್ಲಾ ಸಚಿವರ ಬಾಯಿ ಬಂದ್ ಆಗಿದೆ?
ಅಲ್ಲೂ ಬಿಜೆಪಿ, ಇಲ್ಲೂ ಬಿಜೆಪಿ ಎರಡೂ ಸರ್ಕಾರಗಳು ಸೇರಿಕೊಂಡು ಕನ್ನಡಿಗರನ್ನು ವಂಚಿಸುತ್ತಿವೆ.ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯವಾಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿದಿದೆ.
ಅಲ್ಲೂ ನಮ್ಮದೇ ಸರ್ಕಾರ ಎಂಬ ಮಮಕಾರವೇ @BJP4Karnataka ಗೆ?
— Karnataka Congress (@INCKarnataka) December 3, 2022