ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಕಂದಾಯ ವೃತ್ತಗಳಲ್ಲಿ ಖಾಲಿ ಇರುವ ಗ್ರಾಮ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
BIGG NEWS : ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ : 2022-23 ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
ಈ ಸಂಬಂಧ ಹಿರಿಯೂರು ತಹಶೀಲ್ದಾರ್ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಹಿರಿಯೂರು ತಾಲೂಕಿನ ಕಂದಾಯ ವೃತ್ತಗಳಲ್ಲಿ ಖಾಲಿ ಇರುವಂತ 7 ಗ್ರಾಮ ಸಹಾಯಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ 15 ದಿನಗಳೊಳಗಾಗಿ ಅರ್ಜಿ ಸಲ್ಲಿಸುವಂತೆ ಕೋರಿದ್ದಾರೆ.
ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಪೊಲೀಸರನ್ನು ಅಮಾನತುಗೊಳಿಸಬೇಕು – ಕರವೇ ಪ್ರವೀಣ್ ಶೆಟ್ಟಿ
ಹುದ್ದೆಯ ವಿವರ
- ಕಸಬ ಹೋಬಳಿ – ಹುಚ್ಚವ್ವನಹಳ್ಳಿ, ಹಿರಿಯೂರು
- ಐಮಂಗಲ ಹೋಬಳಿ – ಸೊಂಡೆಕೆರೆ, ಐಮಂಗಲ
- ಧರ್ಮಪುರ ಹೋಬಳಿ – ಹಲಗಲದ್ದಿ
- ಜೆ.ಜಿ ಹಳ್ಳಿ ಹೋಬಳಿ – ರಂಗನಾಥಪುರ, ಕಾಟನಾಯಕನಹಳ್ಳಿ
ಅರ್ಜಿ ಸಲ್ಲಿಸಲು ಅರ್ಹತೆಗಳು
- ಅಭ್ಯರ್ಥಿಯು 25 ವರ್ಷ ಮೇಲ್ಪಟ್ಟಿರಬೇಕು.
- ಅಕ್ಷರಸ್ಥರಾಗಿರಬೇಕು.
- ಸಾಮಾನ್ಯ ಕಂಪೂಟ್ಯರ್ ಸಾಕ್ಷರತೆಯ ತರಬೇತಿ ಹೊಂದಿರಬೇಕು
- ಎಸ್ಸಿ, ಎಸ್ಟಿ ಸಮುದಾಯದವರಿಗೆ ಮೊದಲ ಆದ್ಯತೆ
- ಕ್ರಿಮಿನಲ್ ಮೊಕದ್ದಮೆ ಹಿನ್ನಲೆಯ ಹೊಂದರಬಾರದು
- ಕಂದಾಯ ವೃತ್ತಕ್ಕೆ ಸೇರಿದ ಗ್ರಾಮಗಳ ನಿವಾಸಿಯಾಗಿರಬೇಕು.
ಈ ಅರ್ಹತೆಯೊಂದಿಗೆ ಮೇಲ್ಕಂಡ 7 ಗ್ರಾಮಗಳಲ್ಲಿ ಖಾಲಿ ಇರುವಂತ ಗ್ರಾಮ ಸಹಾಯಕರ ಹುದ್ದೆಗೆ ದಿನಾಂಕ 19-12-2022ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ