ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಳಿಗಾಲದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತವೆ. ಇದು ಚರ್ಮದಿಂದ ಹಿಡಿದು ಕೂದಲಿನ ಸಮಸ್ಯೆಗಳು ಹೆಚ್ಚು. ಈ ಋತುವಿನಲ್ಲಿ ಕೂದಲು ಹೆಚ್ಚು ಉದುರುವುದು, ಎಣ್ಣೆ ಅಂಶ ಕಡಿಮೆಯಾಗುವುದು, ಕೂದಲು ಒಣಗುವುದು, ತೆಲೆಹೊಟ್ಟು ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.
BREAKING NEWS: ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ: ಮೂವರು ಮಕ್ಕಳಿಗೆ ವಿಷವುಣಿಸಿ, ತಾಯಿ ನೇಣಿಗೆ ಶರಣು
ಅದರಲ್ಲೂ ತಲೆಹೊಟ್ಟಿನ ಸಮಸ್ಯೆ ಸಾಕಷ್ಟು ಮುಜುಗರಕ್ಕೆ ಕಾರಣವಾಗುತ್ತದೆ. ನೆತ್ತಿಯ ಚರ್ಮವು ನಿಮ್ಮ ಭುಜಗಳು ಮತ್ತು ಬಟ್ಟೆಗಳ ಮೇಲೆ ಬೀಳಲು ಪ್ರಾರಂಭಿಸಿದಾಗ, ಅದು ತುಂಬಾ ಕೆಟ್ಟದಾಗಿ ಕಾಣುತ್ತದೆ
ನೆತ್ತಿ ಸೂಕ್ಷ್ಮವಾಗಿರುವವರು ಹೆಚ್ಚು ಹೇರ್ ಪ್ರಾಡಕ್ಟ್ ಮತ್ತು ಸ್ಟೈಲಿಂಗ್ ಉತ್ಪನ್ನಗಳನ್ನು ಬಳಸುವುದರಿಂದ ತಲೆಹೊಟ್ಟು ಸಮಸ್ಯೆಯೂ ಹೆಚ್ಚಾಗುತ್ತದೆ. ಆದರೆ ಇದಕ್ಕೆ ಮನೆಯಲ್ಲಿಯೇ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಮನೆಮದ್ದುಗಳನ್ನು ಬಳಸಬಹುದು.
ಡ್ಯಾಂಡ್ರಫ್ ಸಮಸ್ಯೆಗೆ ಮನೆಮದ್ದುಗಳು
ಪ್ರತಿದಿನ ತಲೆ ಬಾಚಿ
ಕೆಲವರಿಗೆ ಅದರಲ್ಲೂ ಮನೆಯಲ್ಲಿಯೇ ಇರುವವರಿಗೆ ಪ್ರತಿದಿನ ತಲೆ ಬಾಚುವ ಅಭ್ಯಾಸ ಇರುವುದಿಲ್ಲ. ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆ ಇರುವವರು ಪ್ರತಿನಿತ್ಯ ಕೂದಲನ್ನು ಬಾಚಿಕೊಳ್ಳಬೇಕು. ಬಾಚಣಿಗೆಯಿಂದ ನೆತ್ತಿಯು ಉತ್ತೇಜಿತವಾಗುತ್ತದೆ ಮತ್ತು ರಕ್ತ ಪರಿಚಲನೆಯು ಉತ್ತಮಗೊಳ್ಳುತ್ತದೆ.ಇದರಿಂದ ನೆತ್ತಿಯಲ್ಲಿ ನೈಸರ್ಗಿಕ ಎಣ್ಣೆಯ ಸ್ರವಿಸುವಿಕೆಯು ಹೆಚ್ಚಾಗುತ್ತದೆ. ತಲೆ ಬಾಚುವುದರಿಂದ ಕೂದಲು ಮತ್ತು ತಲೆಬುರುಡೆ ಎರಡೂ ಆರೋಗ್ಯವಾಗಿರುತ್ತದೆ. ಮಾತ್ರವಲ್ಲ, ಇದು ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಟೊಮೆಟೊ ಮತ್ತು ಮುಲ್ತಾನಿ ಮಿಟ್ಟಿ
ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ಟೊಮೆಟೊ ಮತ್ತು ಮುಲ್ತಾನಿ ಮಿಟ್ಟಿಯೂ ಸಹಕಾರಿ ಆಗಿದೆ. ಟೊಮೆಟೊ ರಸ ಮತ್ತು ಮುಲ್ತಾನಿ ಮಿಟ್ಟಿಯನ್ನು ಒಟ್ಟಿಗೆ ಸೇರಿಸಿ ಪೇಸ್ಟ್ ತಯಾರಿಸಿ. ಅದರ ನಂತರ ಅದನ್ನು ತಲೆಗೆ ಹಚ್ಚಿ ಅದು ಡ್ರೈ ಆಗುವವರೆಗೂ ಹಾಗೇ ಬಿಡಿ. ನಂತರ ಸಾಮಾನ್ಯ ನೀರಿನಲ್ಲಿ ಹೇರ್ ವಾಶ್ ಮಾಡಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಡ್ಯಾಂಡ್ರಫ್ ಸಮಸ್ಯೆಯಿಂದ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ.
ಅಲೋವೆರಾ
ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸಲು ಮತ್ತೊಂದು ಸುಲಭ ಪರಿಹಾರ ಎಂದರೆ ಅಲೋವೆರಾ. ಇದಕ್ಕಾಗಿ ಅಲೋವೆರಾದ ಲೋಳೆಯನ್ನು ತೆಗೆದು ಕೂದಲಿನ ಬುಡಕ್ಕೆ ಹಚ್ಚಿ. ಸ್ವಲ್ಪಸಮಯದ ನಂತರ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ. ಈ ರೀತಿ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು
ಮೆಂತ್ಯ
ತಲೆಹೊಟ್ಟು ಹೋಗಲಾಡಿಸಲು, ಮೆಂತ್ಯ ಬೀಜಗಳನ್ನು ಸಹ ಬಳಸಬಹುದು. ಮೆಂತ್ಯ ಬೀಜಗಳನ್ನು ನೆನೆಸಿಡಿ. ಚೆನ್ನಾಗಿ ನೆನೆಸಿದ ನಂತರ ಇದರ ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಒಣಗಲು ಬಿಡಿ. ಅದರ ನಂತರ ಕೂದಲನ್ನು ತೊಳೆಯಿರಿ.
ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಮತ್ತು ಕರ್ಪೂರ
ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಸ್ವಲ್ಪ ಕರ್ಪೂರವನ್ನು ಬೆರೆಸಿ ಕೂದಲಿಗೆ ಮಸಾಜ್ ಮಾಡಬಹುದು. ಹೀಗೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.
ರಾಜಕಾರಣದಿಂದ ಹಣ ಗಳಿಸೋದಕ್ಕೆ ಐಎಎಸ್ ಅಧಿಕಾರಿಗಳು, ರೌಡಿಗಳು ಇಳಿಯುತ್ತಿದ್ದಾರೆ – ಸಂತೋಷ್ ಹೆಗ್ಡೆ