ಬೆಂಗಳೂರು: ಕೆ ಎಸ್ ಆರ್ ಟಿ ಸಿಯಿಂದ ಸಾಂದರ್ಭಿಕ ಒಪ್ಪಂದದ ದರಗಳನ್ನು ಹೆಚ್ಚಳ ಮಾಡಲಾಗಿದೆ. ಇಂಧನದ ದರ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಒಪ್ಪಂದದ ಮೇರೆಗೆ ಕೊಂಡೊಯ್ಯುವಂತ ಕೆ ಎಸ್ ಆರ್ ಟಿ ಸಿ ಬಸ್ ದರವನ್ನು ( KSRTC Bus ) ಹೆಚ್ಚಳ ಮಾಡಲಾಗಿದೆ.
BIG NEWS: ಬೆಸ್ಕಾಂನಿಂದ 24 ಗಂಟೆ ‘ವೆಬ್ ಪೋರ್ಟಲ್’ ಸೇವೆ ಪುನರಾರಂಭ: ಈ ಎಲ್ಲಾ ಸೌಲಭ್ಯ ಆನ್ ಲೈನ್ ನಲ್ಲೇ ಲಭ್ಯ
ಕೆ ಎಸ್ ಆರ್ ಟಿ ಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ( KSRTC Chief Traffic Manager ) ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಇತ್ತೀಚಿನ ದಿನಗಳಲ್ಲಿ ಇಂಧನ ದರ ಹಾಗೂ ಇತರೆ ವೆಚ್ಚಗಳ ಹೆಚ್ಚಳದಿಂದಾಗಿ ನಿಗಮದ ವಾಹನಗಳ ಕಾರ್ಯಾಚರಣಾ ವೆಚ್ಚ ಹೆಚ್ಚಳವಾಗಿರುವುದನ್ನು ಪರಿಗಣಿಸಿ, ಸಾಂದರ್ಭಿಕ ಒಪ್ಪಂದದ ದರ ಪರಿಷ್ಕರಣೆ ಮಾಡಲಾಗಿದೆ ಎಂದಿದ್ದಾರೆ.
BREAKING NEWS : ಬಳ್ಳಾರಿಯಲ್ಲಿ ಘೋರ ಘಟನೆ : ಹುಚ್ಚು ನಾಯಿ ದಾಳಿಗೆ ಇಬ್ಬರು ಮಕ್ಕಳು ಬಲಿ
ಪರಿಷ್ಕೃತ ದರದಂತೆ ಕರ್ನಾಟಕ ಸಾರಿಗೆ ಸಂಸ್ಥೆಯ 55, 47 ಮತ್ತು 49 ಸೀಟ್ ಗಳ ಬಸ್ ಗಳಿಗೆ ಕನಿಷ್ಠ 300 ಕಿಲೋಮೀಟರ್ ದಿನಕ್ಕೆ ನಿಗದಿಯಂತೆ ರಾಜ್ಯದೊಳೆಗೆ ಪ್ರತಿ ಕಿಲೋಮೀಟರ್ ಗೆ 44 ರೂ ನಿಗದಿ ಪಡಿಸಲಾಗಿದೆ. ಅಂತರರಾಜ್ಯಕ್ಕೆ ಕರೆದೊಯ್ಯುವಂತ ಬಸ್ ಗಳಿಗೆ ಪ್ರತಿ ಕಿಲೋಮೀಟರ್ ಗೆ ರೂ.47 ನಿಗದಿ ಪಡಿಸಲಾಗಿದೆ.
ರಾಜ್ಯದಲ್ಲಿ ಆರ್&ಡಿ ಹಾಗೂ ತಯಾರಿಕಾ ಘಟಕಗಳ ಸ್ಥಾಪನೆಗೆ ಯುಕೆ ಹೂಡಿಕೆದಾರರಿಗೆ ಸಿಎಂ ಬೊಮ್ಮಾಯಿ ಆಹ್ವಾನ
ಇನ್ನೂ ರಾಜಹಂಸ ಎಕ್ಸಿಕ್ಯೂಟಿವ್ 36 ಆಸನಗಳ ಬಸ್ ದರವನ್ನು ರಾಜ್ಯದೊಳಗೆ 46 ರೂ, ಅಂತರರಾಜ್ಯಕ್ಕೆ 51 ರೂ ನಿಗದಿ ಪಡಿಸಲಾಗಿದೆ. ರಾಜಹಂಸ 39 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ದಿನಕ್ಕೆ ಕನಿಷ್ಠ ನಿಗದಿಪಡಿಸಿ, ರಾಜ್ಯದೊಳಗೆ 49 ರೂ, ಹೊರರಾಜ್ಯಕ್ಕೆ 53 ರೂ ನಿಗದಿ ಪಡಿಸಲಾಗಿದೆ. ರಾಜಹಂಸ 12 ಮೀಟರ್ ಚಾಸಿಸ್ ನ 44 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ಕನಿಷ್ಠ ದಿನಕ್ಕೆ ನಿಗದಿ ಪಡಿಸಿ, ರಾಜ್ಯದೊಳಗೆ 51 ರೂ ಪ್ರತಿ ಕಿಲೋಮೀಟರ್ ಗೆ ಹಾಗೂ ಹೊರ ರಾಜ್ಯಗಳಿಗೆ ಪ್ರತಿ ಕಿಲೋಮೀಟರ್ ಗೆ ರೂ.55 ನಿಗದಿಪಡಿಸಲಾಗಿದೆ.
BIG NEWS: ಬೆಸ್ಕಾಂನಿಂದ 24 ಗಂಟೆ ‘ವೆಬ್ ಪೋರ್ಟಲ್’ ಸೇವೆ ಪುನರಾರಂಭ: ಈ ಎಲ್ಲಾ ಸೌಲಭ್ಯ ಆನ್ ಲೈನ್ ನಲ್ಲೇ ಲಭ್ಯ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜಾರಿಗೊಳಿಸಿರುವಂತ ಪರಿಷ್ಕೃತ ದರಗಳು ದಿನಾಂಕ 02-12-2022ರಿಂದ ಜಾರಿಗೆ ಬರಲಿವೆ. ಈ ಆದೇಶ ಹೊರಡಿಸುವ ಮೊದಲು ಬುಕ್ಕಿಂಗ್ ಮಾಡಿಕೊಂಡಿರುವ ಒಪ್ಪಂದದ ವಾಹನಗಳಿಗೆ, ಹಳೆಯ ದರಗಳನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ