ಚಿತ್ರದುರ್ಗ : ಮುರುಘಾ ಶ್ರೀ ವಿರುದ್ಧ ಎರಡನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ (ಡಿ.1) ಇಂದು ಮುರುಘಾ ಶ್ರೀ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಮುರುಘಾ ಶ್ರೀಗಳಿಗೆ ಜೈಲೇ ಗತಿಯಾಗಿದೆ.
ಮುರುಘಾ ಶ್ರೀ ವಿರುದ್ಧ ಎರಡನೇ ಪೋಕ್ಸೋ ಕೇಸ್ ಕುರಿತು ಇತ್ತೀಚೆಗೆ ವಿಚಾರಣೆ ನಡೆಸಿದ್ದ ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಡಿ.1 ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿತ್ತು, ಈ ಹಿನ್ನೆಲೆ ಇಂದು ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದೆ.
ಬಾಲಕಿಯರ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಮುರುಘಾ ಮಠದ ಶಿವಮೂರ್ತಿ ಸ್ವಾಮಿಗಳ ಮೇಲಿದ್ದು, ಅವರಿಗೆ ಸಹಾಯ ಮಾಡಿದ ಆರೋಪ ಇತರರ ಮೇಲೆ ಇದೆ. ಮುರುಘ ಶ್ರೀಗಳ ಎರಡನೇ ಪೋಸ್ಕೋ ಕೇಸ್ ನ ಜಾಮೀನ ಅರ್ಜಿ ವಿಚಾರಣೆ ಕಳೆದ ನವೆಂಬರ್ 28 ರಂದು ನಡೆದಿತ್ತು.