ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಸಾರಿಗೆ ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣೆಗೆ ( KSRTC Employee Transfer ) ಒಪ್ಪಿಗೆ ಸೂಚಿಸಲಾಗಿತ್ತು. ಈ ಬೆನ್ನಲ್ಲೇ 1013 ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಲು ಕೌನ್ಸಲಿಂಗ್ ಗೆ ದಿನಾಂಕ ( Counselling Date ) ನಿಗದಿಗೊಳಿಸಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( Karnataka State Road Transport Corporation – KSRTC ) ಹಾಗೂ ಅಧಿಕಾರಯುತ ಸಮಿತಿ ಅಧ್ಯಕ್ಷರಾದ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಅವರು ಹೊರಡಿಸಿರುವಂತ ಆದೇಶದಲ್ಲಿ ಕರ್ನಾಟಕ ರಾಜ್ಯದ ನಾಲ್ಕೂ ರಸ್ತೆ ಸಾಗಿರೆ ನಿಗಮ, ಸಂಸ್ಥೆಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರನ್ನು ಅಂತರ ನಿಗಮ, ಸಂಸ್ಥೆಗಳಿಗೆ ಶಾಶ್ವತವಾಗಿ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ
ಇನ್ನೂ ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದ್ದು, ವರ್ಗಾವಣೆಯಾಗಿರುವ ನಿಗಮ, ಸಂಸ್ಥೆಗಳಲ್ಲಿನ ಸೇವಾ ಜ್ಯೇಷ್ಠತೆ ಹಾಗೂ ಖಾಲಿ ಹುದ್ದೆಗಳಿಗೆ ಅನುಗುಣವಾಗಿ ಕೌನ್ಸೆಲಿಂಗ್ ಮೂಲಕ ವಿಭಾಗಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಕೌನ್ಸಲಿಂಗ್ ಅನ್ನು ದಿನಾಂಕ 05-12-2022 ರಿಂದ 15-12-2022ರವರೆಗೆ https://ksrtc.org/counselling ವೆಬ್ ಸೈಟ್ ನಲ್ಲಿ ನಡೆಸಲಾಗುವುದು. ಒಮ್ಮೆ ಆದ್ಯತೆ ಸಲ್ಲಿಸಿದ ನಂತ್ರ ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ ಲೈನ್ ಮೂಲಕ ನಡೆಯುವುದರಿಂದ, ಲಿಖಿತ ಅರ್ಜಿಗಳ ಆಧಾರದ ಮೇಲೆ ಯಾವುದೇ ಕ್ರಮವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ