ಮಂಗಳೂರು : ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಮಾಹಿತಿ ಬಯಲಾಗಿದ್ದು,ಮಂಗಳೂರಿನಲ್ಲಿ ನಡೆದ ಸ್ಪೋಟಕ್ಕೆ ಶಾರೀಖ್ ಗೆ ಮತ್ತೋರ್ವ ವ್ಯಕ್ತಿ ಸಾಥ್ ನೀಡಿದ್ದಾನೆ ಎಂಬ ಅನುಮಾನ ಮೂಡಿದೆ.
ಇತ್ತೀಚೆಗೆ ಶಾರೀಖ್ ಕುಕ್ಕರ್ ಹಿಡಿದು ನಿಂತಿರುವ ಫೋಟೋ ವೈರಲ್ ಆಗಿದ್ದು, ಮೊದಲಿಗೆ ಇದು ಸೆಲ್ಪಿ ಮೋಡ್ ನಲ್ಲಿ ತೆಗೆದಿರುವ ಫೋಟೋ ಎಂಬುದಾಗಿ ಹೇಳಲಾಗಿತ್ತು, ಆದರೆ ಇದೀಗ ಈ ಫೋಟೋ ಮೊಬೈಲ್ ನ ಬ್ಯಾಕ್ ಕ್ಯಾಮೆರಾದಲ್ಲಿ ತೆಗೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ಶಾರೀಖ್ ಕುಕ್ಕರ್ ಹಿಡಿದು ನಿಂತಿರುವ ಫೋಟೋವನ್ನು ಇನ್ನೊಬ್ಬ ವ್ಯಕ್ತಿ ತೆಗೆದಿದ್ದಾನೆ ಎಂದು ಹೇಳಲಾಗಿದ್ದು, ಆ ವ್ಯಕ್ತಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಹಲವು ಆಯಾಮಗಳಲ್ಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ಆಟೋ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಇತ್ತೀಚೆಗೆ ಉಡುಪಿ ಮಠಕ್ಕೆ ಕೂಡ ಬಂದಿದ್ದನು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಅಕ್ಟೋಬರ್ 16 ರಂದು ಉಡುಪಿಯ ಕಾರ್ ಸ್ಟ್ರೀಟ್ ಪ್ರದೇಶಕ್ಕೆ ಬಂದು ಕಾರ್ಕಳ ಮತ್ತು ಬಂಟ್ವಾಳಕ್ಕೆ ಪ್ರಯಾಣ ಬೆಳೆಸಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃಷ್ಣಮಠದ ಕಾರ್ ಸ್ಟ್ರೀಟ್ ಪ್ರದೇಶದ ಅಂಗಡಿಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಶಾರೀಖ್ ಉಡುಪಿ ಮಠಕ್ಕೆ ಬಂದು ಹೋಗಿರುವ ಕುರಿತು ಗೊತ್ತಾಗಿದೆ. ಅಕ್ಟೋಬರ್ 16 ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆಯ ಹಿನ್ನೆಲೆಯಲ್ಲಿ ಕೃಷ್ಣ ಮಠ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಶ್ರೀಮಂತರ ಮನೆಯೇ ಟಾರ್ಗೆಟ್, ರಾಬರಿ ಜೊತೆ ವೇಶ್ಯಾವಾಟಿಕೆ ದಂಧೆ’ : ಖತರ್ನಾಕ್ ಲೇಡಿ ಅರೆಸ್ಟ್