ಬೆಂಗಳೂರು : ನಗರದ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಬಳಿ ಇರುವ ವಿಲೇಜ್ ರೆಸ್ಟೋರೆಂಟ್’ ಗೆ ಬಂದಿದ್ದ ಕಾಂಗ್ರೆಸ್ ಮುಖಂಡನ ಪುತ್ರ ಹಾಗೂ ಆತನ ಸ್ನೇಹಿತರು ಪುಂಡಾಟ ಮರೆದಿದ್ದು, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನ.20 ರಂದು ಘಟನೆ ನಡೆದಿದ್ದು, ಆದರೆ ತಡವಾಗಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಮುಖಂಡ ಬರ್ತ್ ಡೇ ಪಾರ್ಟಿಗೆ ಬಂದಿದ್ದ ಯುವಕರಿಂದ ಪುಂಟಾಟ ನಡೆದಿದೆ ಎನ್ನಲಾಗಿದೆ. ಆರ್ಡರ್ ಮಾಡಿದ್ದ ಊಟ ಕೊಡದೇ ಇದ್ದಕ್ಕೆ ಹಲ್ಲೆ ನಡೆದಿದೆ.
ರೆಸ್ಟೋರೆಂಟ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು, ಜಗಳ ಬಿಡಿಸಲು ಬಂದ ಇತರರ ಮೇಲೂ ಹಲ್ಲೆ ನಡೆಸಲಾಗಿದೆ. ಅಲ್ಲದೇ ಪುಂಡರು ರೆಸ್ಟೋರೆಂಟ್ ನಲ್ಲಿ ಟೇಬಲ್, ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿದರೆ ಅವರು ಬರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.