ಬೆಂಗಳೂರು: ಗಡಿಪಾರು ಆಗಿದ್ದ ವ್ಯಕ್ತಿಯನ್ನೇ ಪಕ್ಷದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ಪುಡಿ ರೌಡಿಗಳೆಲ್ಲ ದೇವರುಗಳಂತೆ ಕಾಣುವುದು ಸಹಜ ವಿಚಾರವೇ.. ದೋ ನಂಬರ್ ದಂಧೆ ಮಾಡುವವರೇ ಬಿಜೆಪಿಗೆ ಅದರ್ಶಪುರುಷರು. ಕ್ರಿಮಿನಲ್ಗಳನ್ನು ಸುಭಗರಂತೆ ಸಮರ್ಥಿಸುತ್ತಿರುವ ಬಿಜೆಪಿ ಲಜ್ಜೆಗೇಡಿತನದ ಪರಮಾವಧಿಯನ್ನು ತಲುಪಿದೆ ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ವಾಗ್ಧಾಳಿ ನಡೆಸಿದೆ.
ಗಡಿಪಾರು ಆಗಿದ್ದ ವ್ಯಕ್ತಿಯನ್ನೇ ಪಕ್ಷದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ಪುಡಿ ರೌಡಿಗಳೆಲ್ಲ ದೇವರುಗಳಂತೆ ಕಾಣುವುದು ಸಹಜ ವಿಚಾರವೇ..
ದೋ ನಂಬರ್ ದಂಧೆ ಮಾಡುವವರೇ ಬಿಜೆಪಿಗೆ ಅದರ್ಶಪುರುಷರು.ಕ್ರಿಮಿನಲ್ಗಳನ್ನು ಸುಭಗರಂತೆ ಸಮರ್ಥಿಸುತ್ತಿರುವ @BJP4Karnataka ಲಜ್ಜೆಗೇಡಿತನದ ಪರಮಾವಧಿಯನ್ನು ತಲುಪಿದೆ.
— Karnataka Congress (@INCKarnataka) November 29, 2022
ಈ ಕುರಿತು ಟ್ವಿಟ್ ( Twitter ) ಮಾಡಿದ್ದು, ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನು ಬಿಜೆಪಿ ಕಸಿಯುತ್ತಿದೆ, ಪೊಲೀಸರೇ ರೌಡಿಗಳಿಗೆ ಸೆಲ್ಯೂಟ್ ಹೊಡೆಯುವ ಪರಿಸ್ಥಿತಿ ನಿರ್ಮಿಸುತ್ತಿದೆ. ಮೊನ್ನೆಯಷ್ಟೇ ಸೈಲೆಂಟ್ ಸುನಿಲ್ ಎಂಬ ರೌಡಿಯನ್ನು ಹುಡುಕಿ ರೈಡ್ ಮಾಡಿದ್ದ ಪೊಲೀಸರೇ ಈಗ ಆತನ ಎದುರು ಸೈಲೆಂಟ್ ಆಗಿದ್ದಾರೆ. ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದೆ ಸರ್ಕಾರ? ಎಂದು ಪ್ರಶ್ನಿಸಿದೆ.
ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನು @BJP4Karnataka ಕಸಿಯುತ್ತಿದೆ, ಪೊಲೀಸರೇ ರೌಡಿಗಳಿಗೆ ಸೆಲ್ಯೂಟ್ ಹೊಡೆಯುವ ಪರಿಸ್ಥಿತಿ ನಿರ್ಮಿಸುತ್ತಿದೆ.
ಮೊನ್ನೆಯಷ್ಟೇ ಸೈಲೆಂಟ್ ಸುನಿಲ್ ಎಂಬ ರೌಡಿಯನ್ನು ಹುಡುಕಿ ರೈಡ್ ಮಾಡಿದ್ದ ಪೊಲೀಸರೇ ಈಗ ಆತನ ಎದುರು ಸೈಲೆಂಟ್ ಆಗಿದ್ದಾರೆ.
ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದೆ ಸರ್ಕಾರ? pic.twitter.com/m2SOO2fWdG
— Karnataka Congress (@INCKarnataka) November 29, 2022
40% ಕಮಿಷನ್ ವಸೂಲಿ ಸಾಲದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೂ ಬಿಜೆಪಿ ತಯಾರಿ ನಡೆಸಿರುವಂತಿದೆ! ಬಿಜೆಪಿಯಲ್ಲಿ “ರೌಡಿ ಮೋರ್ಚಾ” ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ. ಸೋಲುವ ಭಯದಲ್ಲಿರುವ ಬಿಜೆಪಿ ರೌಡಿಗಳನ್ನು ಬಳಸಿ ಚುನಾವಣೆಗೆ ಸಿದ್ಧತೆ ನಡೆಸಿದೆಯೇ ಬಸವರಾಜ ಬೊಮ್ಮಾಯಿ ಅವರೇ? ಇದೇನಾ ಬಿಜೆಪಿಯ ಸಂಸ್ಕೃತಿ, ಸಂಸ್ಕಾರ? ಎಂದು ಕೇಳಿದೆ.
40% ಕಮಿಷನ್ ವಸೂಲಿ ಸಾಲದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೂ @BJP4Karnataka ತಯಾರಿ ನಡೆಸಿರುವಂತಿದೆ!
ಬಿಜೆಪಿಯಲ್ಲಿ "ರೌಡಿ ಮೋರ್ಚಾ" ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ.ಸೋಲುವ ಭಯದಲ್ಲಿರುವ ಬಿಜೆಪಿ ರೌಡಿಗಳನ್ನು ಬಳಸಿ ಚುನಾವಣೆಗೆ ಸಿದ್ಧತೆ ನಡೆಸಿದೆಯೇ @BSBommai ಅವರೇ?
ಇದೇನಾ ಬಿಜೆಪಿಯ ಸಂಸ್ಕೃತಿ, ಸಂಸ್ಕಾರ?
— Karnataka Congress (@INCKarnataka) November 29, 2022