ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೈದರಾಬಾದ್’ನಲ್ಲಿರುವ ಮುಖ್ಯಮಂತ್ರಿ ಕೆಸಿಆರ್ ಅವರ ನಿವಾಸದತ್ತ ಮೆರವಣಿಗೆ ನಡೆಸಲು ಪ್ರಯತ್ನಿಸಿದ ನಂತ್ರ ವೈಎಸ್ ಆರ್ ಟಿಪಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರನ್ನ ಬಂಧಿಸಲಾಗಿದೆ.
ಇನ್ನು ಇದಕ್ಕೂ ಮುನ್ನ ವೈಎಸ್ ಶರ್ಮಿಳಾ ವಿರುದ್ಧ ಹೈದರಾಬಾದ್ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶರ್ಮಿ ವಿರುದ್ಧ ಐಪಿಸಿ ಸೆಕ್ಷನ್ 353, 333, 327 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂದ್ಹಾಗೆ, ವೈಎಸ್ಆರ್ಟಿಪಿ ಅಧ್ಯಕ್ಷೆ ವೈಎಸ್ ಶರ್ಮಿ ಪ್ರಗತಿ ಭವನದಲ್ಲಿ ಪ್ರತಿಭಟನೆಗೆ ಕರೆ ನೀಡಿದಾಗ ಪೊಲೀಸರು ತಡೆದರು. ಇದ್ರಿಂದ ಕೋಪಗೊಂಡ ನಾಯಕಿ, ಅವ್ರೇ ಕಾರು ಚಲಾಯಿಸಿಕೊಂಡು ಮುಂದೆ ಸಾಗಲು ಯತ್ನಿಸಿದ್ರು. ಆದ್ರೆ, ಪೊಲೀಸರು ಕಾರನ್ನ ಮುಂದೆ ಸಾಗದಂತೆ ತಡೆದರು. ಕೋಪಗೊಂಡ ಶರ್ಮಿಳಾ ಕಾರಿನಲ್ಲಿ ಕುಳಿತರು. ಪೊಲೀಸರು ಮನವೋಲಿಸಲು ಯತ್ನಿಸಿದರಾದ್ರೂ ಅದು ಯಶಸ್ವಿಯಾಗದಾಗ ನಾಯಕಿ ಇರುವ ಕಾರನ್ನ ಕ್ರೇನ್ ಮೂಲಕ ಕರೆದೊಯ್ದು ಎಸ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ಎಸ್ಆರ್ನಗರ ಠಾಣೆಗೆ ಸ್ಥಳಾಂತರಗೊಂಡ ನಂತ್ರ ಅಲ್ಲಿಯೂ ಹೈಡ್ರಾಮಾ ನಡೆಯಿತು. ಕಾರಿನಲ್ಲಿದ್ದ ಶರ್ಮಿಳಾ ಹೊರಗೆ ಬರಲು ನಿರಾಕರಿಸಿದರು. ಪೊಲೀಸರು ಎಷ್ಟೇ ಮನವಿ ಮಾಡಿದರೂ ಹೊರ ಬರಲು ಒಪ್ಪಲಿಲ್ಲ. ಪೊಲೀಸರು ಬಲವಂತವಾಗಿ ಕಾರಿನ ಬಾಗಿಲು ತೆರೆದು ಅವ್ರನ್ನ ಹೊರಗೆ ಕರೆದೊಯ್ದರು.
‘ಮತದಾರರ ಪಟ್ಟಿ’ಯಿಂದ ನಿಮ್ಮ ಹೆಸ್ರು ಕಾಣೆಯಾಗಿದ್ಯಾ.? ‘ಸೆಕೆಂಡು’ಗಳಲ್ಲೇ ಕಂಡು ಹಿಡಿಯಿರಿ
‘ಸ್ವ ಉದ್ಯೋಗಾಕಾಂಕ್ಷಿ’ಗಳಿಗೆ ಗುಡ್ ನ್ಯೂಸ್: ‘ಉಚಿತ ಜೇನು ಕೃಷಿ ತರಬೇತಿ’ಗೆ ಅರ್ಜಿ ಆಹ್ವಾನ