ಕೆಎನ್ಎನ್ಡಿಜಿಟಲ್ ಡೆಸ್ಕ್ : ಈ ಸೃಷ್ಟಿಯಲ್ಲಿ ಕಾಲಕಾಲಕ್ಕೆ ಅನೇಕ ಪವಾಡಗಳು ನಡೆಯುತ್ತಿರುತ್ವೆ. ಕೆಲವು ಸಂದರ್ಭಗಳಲ್ಲಿ ನಂಬಲಾಗದ ವಿಚಿತ್ರ ಘಟನೆಗಳು ಸಂಭವಿಸುತ್ತವೆ. ಕೆಲವು ಘಟನೆಗಳು ನಮಗೆ ಆಶ್ಚರ್ಯವನ್ನುಂಟು ಮಾಡಿದರೆ ಮತ್ತೆ ಕೆಲವು ನಮ್ಮನ್ನು ಭಯಪಡಿಸುತ್ತವೆ. ನಾವು ನಿರೀಕ್ಷಿಸುವುದಕ್ಕಿಂತ ಅನಿರೀಕ್ಷಿತ ಅನುಭವಗಳು ಹೆಚ್ಚು ಸಾಮಾನ್ಯವಾಗಿದೆ.
ಅದ್ರಂತೆ, ಈ ಹಿಂದೆ ಬೇವಿನ ಮರಕ್ಕೆ ಹಾಲು ಬರುವುದು, ಸಾಯಿಬಾಬಾರವರ ಫೋಟೋದಿಂದ ವಿಭೂತಿ ಬೀಳುವುದು, ಗಣೇಶ ಹಾಲು ಕುಡಿಯುವುದು ಹೀಗೆ ಹಲವು ಘಟನೆಗಳನ್ನ ಕೇಳಿದ್ದೇವೆ. ಇನ್ನು ಕೆಲವು ಹಳ್ಳಿಗಳಲ್ಲಿ ಅಮ್ಮನವರ ವಿಗ್ರಹಗಳು ಕಾಣಿಸಿಕೊಂಡು, ಕೆಲವು ಜನರಿಗೆ ಕನಸಿನಲ್ಲಿ ಬಂದು ಭವಿಷ್ಯದ ಬಗ್ಗೆ ಹೇಳುವುದು ಮತ್ತು ಮರಗಳ ಕೆಳಗೆ ವಿಗ್ರಹಗಳನ್ನ ಪ್ರತಿಷ್ಠಾಪಿಸೋದನ್ನ ಮುಂತಾದ ಘಟನೆಗಳ ಬಗ್ಗೆಯೂ ನಾವು ಕೇಳಿದ್ದೇವೆ. ಅಂತಹದ್ದೇ ಒಂದು ಘಟನೆ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮರವೊಂದರ ಮೇಲೆ ದೇವಿಯ ರೂಪ ಮೂಡಿದ್ದು, ಪವಾಡ ನೋಡಲು ಭಕ್ತರು ಧಾಮಿಸುತ್ತಿದ್ದಾರೆ. ಇನ್ನು ಸರತಿ ಸಾಲಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ನಂದ್ಯಾಲ್ ಜಿಲ್ಲೆಯ ಬನಗನಪಲ್ಲಿ ಪಟ್ಟಣದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ತೆಲುಗುಪೇಟೆಯ ಹಳೆಯ ಬಾವಿಯ ಬಳಿ ಇರುವ ಬೇವಿನ ಮರದಲ್ಲಿ ದೇವಿಯ ಆಕಾರ ಮೂಡಿದೆ. ಸ್ಥಳೀಯರು ಹಳದಿ ಕುಂಕುಮದಿಂದ ಅಲಂಕರಿಸಿದ್ದು, ಆಭರಣಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಸಧ್ಯ ದೇವಿಗೆ ವಿಶೇಷ ಪೂಜೆಗಳನ್ನ ನಡೆಸಲಾಗ್ತಿದ್ದು, ಭಕ್ತರು ಸಾಲುಗಟ್ಟಿ ದರ್ಶನ ಪಡೆಯುತ್ತಿದ್ದಾರೆ.
ಬೇವಿನ ಮರಕ್ಕೆ ನೈವೇದ್ಯ ಸಲ್ಲಿಸಿ, ವಿಶೇಷ ಪೂಜೆ, ಆರತಿ ಮಾಡುತ್ತಿದ್ದಾರೆ. ಅಂದ್ಹಾಗೆ, ಕೆಲವು ತಿಂಗಳ ಹಿಂದೆ ಮರದ ಮೇಲ್ಭಾಗವನ್ನ ಗರಗಸದಿಂದ ಕತ್ತರಿಸಲಾಗಿದೆ. ಮರ ಕಡಿದ ಕಾರಣಕ್ಕೆ ಕೋಪಗೊಂಡ ಜಗನ್ಮಾತೆ ಬೇವಿನ ಮರದಲ್ಲಿ ಕಾಣಿಸಿಕೊಂಡಿದ್ದಾಳೆ ಎನ್ನಲಾಗ್ತಿದೆ. ಇನ್ನು ಮರಗಳನ್ನ ಕಡಿಯಬೇಡಿ ಎಂಬ ಸಂದೇಶವನ್ನ ಅಮ್ಮ ಸ್ಪಷ್ಟವಾಗಿ ಸಾರಿದ್ದಾರೆ ಎನ್ನುತ್ತಾರೆ ಭಕ್ತರು.
BREAKING NEWS : ನಾಳೆ ಸುಪ್ರೀಂಕೋರ್ಟ್ ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ವಿಚಾರಣೆ ಇಲ್ಲ
‘ಮತದಾರರ ಪಟ್ಟಿ’ಯಿಂದ ನಿಮ್ಮ ಹೆಸ್ರು ಕಾಣೆಯಾಗಿದ್ಯಾ.? ‘ಸೆಕೆಂಡು’ಗಳಲ್ಲೇ ಕಂಡು ಹಿಡಿಯಿರಿ