ದಕ್ಷಿಣ ಕನ್ನಡ: ಜಿಲ್ಲೆಯ ಉಜಿರೆಯಲ್ಲಿರುವಂತ ರುಡ್ ಸೆಟ್ ಸಂಸ್ಥೆಯಿಂದ ( RUDSET Institute ) ಸ್ವ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಅಗುವ ನಿಟ್ಟಿನಲ್ಲಿ, ಉಚಿತ ಜೇನು ಕೃಷಿ ತರಬೇತಿಗಾಗಿ ( Bee keeping Training ) ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ಉಜಿರೆಯ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದಂತ ಸುರೇಶ್ ( RUDSET Institute Director Suresh ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಪ್ರತಿಷ್ಠಾನ ಮತ್ತು ಕೆನರಾ ಬ್ಯಾಂಕ್ ಜೊತೆ ಯಾಗಿ 40 ವರ್ಷಗಳಿಂದ ಮುನ್ನಡೆಸುತ್ತಿರುವ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಜೇನು ಕೃಷಿ ಉಚಿತ ತರಬೇತಿಯನ್ನು (10 ದಿನಗಳು) ದಿನಾಂಕ 12.12.2022 ರಿಂದ 21.12.2022 ರವರೆಗೆ ಆರಂಭಿಸಲಾಗುವುದು ಎಂದಿದ್ದಾರೆ.
ರಾಜ್ಯದ ಜನತೆಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದಿಂದ ಹೊಸ ರೈಲು ಮಾರ್ಗಕ್ಕೆ ಹಣ ಮಂಜೂರು
ಅರ್ಹ ಅಭ್ಯರ್ಥಿಗಳು ಉಚಿತ ಜೇನು ಕೃಷಿ ತರಬೇತಿಗಾಗಿ ಕಡ್ಡಾಯವಾಗಿ ಗ್ರಾಮೀಣ ಬಿಪಿಎಲ್ ಕಾರ್ಡ್ ( BPL Card ) ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ಎಪಿಎಲ್ ಕಾರ್ಡ ದಾರರು ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಅನ್ನು ಸ್ವ ವಿವರ ಒಳಗೊಂಡಂತ ಅರ್ಜಿಯ ಜೊತೆಗೆ ಸಲ್ಲಿಸಬೇಕು. ಅಲ್ಲದೇ ನಾಲ್ಕು ಪೋಟೋ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಅರ್ಜಿಯನ್ನು ರುಡ್ ಸೆಟ್ ಇನ್ಟಿಟ್ಯೂಟ್, ಉಜಿರಿ-574240ಗೆ ಸಲ್ಲಿಸಬಹುದಾಗಿದೆ. ಈ ತರಬೇತಿಗೆ ಅರ್ಜಿ ಸಲ್ಲಿಸಲು ವಯೋಮಿತಿ 18 ರಿಂದ 45 ವರ್ಷವಾಗಿದೆ. ತರಬೇತಿಯ ಸಂದರ್ಭದಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 08256 236404, 9902594791, 9591044014, 9980885900, 9448484237 ಅಥವಾ www.rudsetitraining.org ಜಾಲತಾಣಕ್ಕೂ ಭೇಟಿ ನೀಡಿ ಪಡೆಯಬಹುದಾಗಿದೆ.