ಬೆಂಗಳೂರು: ನಗರದಲ್ಲಿ ಕ್ರೈಂ ತಡೆಗಟ್ಟುವ ಸಲುವಾಗಿ ಸಿಸಿಬಿ ಇಂದು ಅಲರ್ಟ್ ಆಗಿತ್ತು. ಕೆಲ ದಿನಗಳ ಹಿಂದಿನ ದಾಳಿಯ ವೇಳೆಯಲ್ಲಿ ತಪ್ಪಿಸಿಕೊಂಡಿದ್ದಂತ ರೌಡಿಶೀಟರ್ ಗಳನ್ನು ಪತ್ತೆ ಹಚ್ಚಿ, ಕರೆತಂದು ಸಿಸಿಬಿ ವಿಚಾರಣೆ ನಡೆಸಿತು.
ನವೆಂಬರ್ 23ರಂದು ಸಿಸಿಬಿಯಿಂದ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದಂತ ಆರೋಪಿಗಳು, ರೌಡಿ ಶೀಟರ್ ಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯ ವೇಳೆಯಲ್ಲಿ ಅನೇಕ ಆರೋಪಿಗಳು ನಾಪತ್ತೆಯಾಗಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾದ ಬೆನ್ನಲ್ಲೇ, ಸಿಸಿಬಿ ಇಂದು ಅಲರ್ಟ್ ಆಗಿದೆ.
ರಾಜ್ಯದ ಜನತೆಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದಿಂದ ಹೊಸ ರೈಲು ಮಾರ್ಗಕ್ಕೆ ಹಣ ಮಂಜೂರು
ತಲೆ ಮರೆಸಿಕೊಂಡಿದ್ದಂತ ಆರೋಪಿಗಳನ್ನು ಕರೆತಂದು ವಿಚಾರಣೆ ನಡೆಸಿತು. ವಿಲ್ಸನ್ ಗಾರ್ಡ್ ನ ನಾಗ, ಶ್ರೀಕಾಂತ್ ಆಲಿಯಾಸ್ ಆ್ಯಪಲ್ ಸಂತು, ಲೇಔಟ್ ಅನಿಲ್ ಸೇರಿದಂತೆ ಹಲವರನ್ನು ಕರೆತಂದು ವಿಚಾರಣೆ ನಡೆಸಿತು.
BREAKING: ಬೆಂಗಳೂರಿನ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ: ಪರಿಶೀಲನೆಗೆ ವಿಶೇಷ ಅಧಿಕಾರಿಗಳ ನೇಮಕ
ಇಂದು ಬೆಂಗಳೂರಿನ ಸಿಸಿಬಿ ಕಚೇರಿಗೆ ಕರೆತಂದಂತ ಪೊಲೀಸರು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ, ತಲೆ ಮರೆಸಿಕೊಂಡಿದ್ದಂತ ಹಲವರನ್ನು ವಿಚಾರಣೆಗೆ ಒಳಪಡಿಸಿದರು. ಈ ಮೂಲಕ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ಚಳಿ ಬಿಡಿಸಿದರು.