ನವದೆಹಲಿ: ಕೇಂದ್ರ ಸರ್ಕಾರದಿಂದ ( Central Government ) ರಾಜ್ಯದಲ್ಲಿ ನೂತನ ಹೊಸ ರೈಲು ಮಾರ್ಗಗಳನ್ನು ( New railway line ) ಗುರುತಿಸಲಾಗಿತ್ತು. ಈ ರೈಲು ಮಾರ್ಗಗಳ ಅನುಷ್ಠಾನಕ್ಕಾಗಿ ಇದೀಗ ಕೇಂದ್ರ ಸರ್ಕಾರದಿಂದ ಹಣ ಮಂಜೂರು ಮಾಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆ ( South Western Railway ) ವಲಯದ ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಮಾಹಿತಿ ನೀಡಿದ್ದು, ರೈಲ್ವೆ ಸಚಿವಾಲಯವು, ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಬರುವ ಸ್ವಾಮಿಹಳ್ಳಿ-ರಾಯದುರ್ಗ 52ಕಿ.ಮೀ. ಹೊಸಮಾರ್ಗ ಮತ್ತು ಹೊಸಪೇಟೆ-ಬಳ್ಳಾರಿ 65ಕಿ.ಮೀ ಉದ್ದದ ಚತುಷ್ಪಥ ಮಾರ್ಗ ಫೈನ ಲ್ಲೋಕೇಷನ್ ಸಮೀಕ್ಷೆಮಾಡಲು ಸೂಚಿಸಿದೆ ಎಂದಿದ್ದಾರೆ.
BIGG NEWS : ಕೆಎಸ್ಆರ್ಟಿಸಿಗೆ ಉತ್ತಮ ಟ್ಯಾಗ್ಲೈನ್, ಗ್ರಾಫಿಕ್ ವಿನ್ಯಾಸ ಕೊಟ್ಟವರಿಗೆ ಬಹುಮಾನ | KSRTC
ಹೊಸಪೇಟೆ-ಬಳ್ಳಾರಿ 65 ಕಿ.ಮೀ ಮಾರ್ಗಕ್ಕೆ ರೂ. 2.2 ಕೋಟಿ ಮತ್ತು ಸ್ವಾಮಿಹಳ್ಳಿ-ರಾಯದುರ್ಗ 52 ಕಿ. ಮೀ ಹೊಸಮಾರ್ಗಕ್ಕೆ 5.95 ಕೋಟಿ ಹಣ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
‘ಕೋವಿಡ್ ಲಸಿಕೆ’ಗೆ ಸಂಬಂಧಿಸಿದ ಸಾವಿಗೆ ನಾವು ಜವಾಬ್ದಾರರಲ್ಲ: ‘ಸುಪ್ರೀಂ ಕೋರ್ಟ್’ಗೆ ಕೇಂದ್ರ ಸ್ಪಷ್ಟನೆ