ಬೆಂಗಳೂರು: ಬಿಎಂಟಿಸಿ ಬಸ್ ( BMTC Bus ), ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದಂತ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರೋ ಘಟನೆ ಇಂದು ನಡೆದಿದೆ.
BIG NEWS: ‘ಸೈಲೆಂಟ್ ಸುನಿಲ್’ ‘ಬಿಜೆಪಿ ಸೇರ್ಪಡೆ’ ಅವಕಾಶವಿಲ್ಲ – ನಳಿನ್ಕುಮಾರ್ ಕಟೀಲ್
ಬೆಂಗಳೂರಿನ ನೈಸ್ ರೋಡ್ ಬಳಿಯ ಮಾಗಡಿ ಜಂಕ್ಷನ್ ಬಳಿಯಲ್ಲಿ, ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಈ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದಂತ ರಾಮನಗರ ಜಿಲ್ಲೆ ಗೊಲ್ಲರಹಟ್ಟಿಯ ಇಂದಿರಾ ಕಾಲೋನಿ ನಿವಾಸಿಗಳೆನ್ನಲಾದ ಮಂಜುನಾಥ್(25 ) ಮತ್ತು ಶಿವರಾಜ್ (29) ಎಂಬುವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಂದಹಾಗೇ ಬಿಎಂಟಿಸಿ ಬಸ್ ಬೈಕ್ ನಲ್ಲಿ ತೆರಳುತ್ತಿದ್ದ ಸವಾರರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದರಿಂದಾಗಿ ಕೆಳಗೆ ಬಿದ್ದು ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಲು ಕಾರಣ ಎನ್ನಲಾಗುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ತಾವರೆಕೆರೆ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
BIGG NEWS : ಕೆಎಸ್ಆರ್ಟಿಸಿಗೆ ಉತ್ತಮ ಟ್ಯಾಗ್ಲೈನ್, ಗ್ರಾಫಿಕ್ ವಿನ್ಯಾಸ ಕೊಟ್ಟವರಿಗೆ ಬಹುಮಾನ | KSRTC