ಬೆಂಗಳೂರು: ನಗರದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಇಂದು ಈ ಕುರಿತಂತೆ ಮಾಹಿತಿ ನೀಡಿದಂತ ಅವರು, ಯುವತಿ ಸ್ನೇಹಿತೆಯ ಮನೆಯಿಂದ ಮತ್ತೊಂದು ಮನೆಗೆ ತೆರಳಲು Rapido ಬೈಕ್ ಬುಕ್ ಮಾಡಿದ್ದಾರೆ. ಯುವತಿಯ ಪರಿಸ್ಥಿತಿ ಅರಿತಂತ Rapido ಬೈಕ್ ಸವಾರ, ಸ್ನೇಹಿತ ತಮ್ಮ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂಬುದಾಗಿ ತಿಳಿಸಿದರು.
BIGG NEWS : ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಷಷ್ಟಿ ಸಂಭ್ರಮ’ : ನಾಗ ದೇವರ ದರ್ಶನ ಪಡೆದು ಪುನೀತರಾದ ಭಕ್ತರು
ಯುವತಿ ಬೆಳಿಗ್ಗೆ ಎಚ್ಚರವಾದಾಗ ತನ್ನ ಪರಿಸ್ಥಿತಿ ಅರಿವಾಗಿ, ಆಸ್ಪತ್ರೆಗೆ ತೆರಳಿದ್ದಾರೆ. ಸಂತ್ರಸ್ತ ಯುವತಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಾಗ, ಅತ್ಯಾಚಾರವೆಸಗಿರುವುದು ದೃಢಪಟ್ಟಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
BIG NEWS: ‘ಸೈಲೆಂಟ್ ಸುನಿಲ್’ ‘ಬಿಜೆಪಿ ಸೇರ್ಪಡೆ’ ಅವಕಾಶವಿಲ್ಲ – ನಳಿನ್ಕುಮಾರ್ ಕಟೀಲ್
ಸಂತ್ರಸ್ತ ಯುವತಿ ನೀಡಿದಂತ ದೂರಿನ ಆಧಾರದ ಮೇಲೆ ಆಗ್ನೇಯ ವಿಭಾಗದ ಪೊಲೀಸರು Rapido ಬೈಕ್ ಸವಾರ, ಆತ್ನ ಸ್ನೇಹಿತ ಹಾಗೂ ಮಹಿಳೆಯೋಬ್ಬರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯಲ್ಲಿ ಒಬ್ಬನಿಗೆ ಕ್ರಿಮಿನಲ್ ಹಿನ್ನಲೆಯಿದೆ. ಊಗ ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.