ಮಂಡ್ಯ: ಕೀಟನಾಶಕ ಮಿಶ್ರಿತ ನೀರು ಸೇವಿಸಿದಂತ ಮಕ್ಕಳು ಸೇರಿದಂತೆ 15ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ, ಮದ್ದೂರು ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ.
Job Alert: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ‘ನಮ್ಮ ಕ್ಲಿನಿಕ್’ನಲ್ಲಿ ಖಾಲಿ ಇರುವ ‘ವೈದ್ಯರ ಹುದ್ದೆ’ ಅರ್ಜಿ ಆಹ್ವಾನ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಕೊಪ್ಪಲು ಗ್ರಾಮಕ್ಕೆ ಕಬ್ಬು ಕಟಾವಿಗೆಂದು ಬಳ್ಳಾರಿಯಿಂದ 30ಕ್ಕೂ ಹೆಚ್ಚು ಜನರು ತೆರಳಿದ್ದರು. ಹೀಗೆ ಕಬ್ಬು ಕಟಾವಿಗೆ ಬಂದಿದ್ದಂತ ಜನರಿಗೆ ಮಧ್ಯಾಹ್ನದ ಊಟದ ನಂತ್ರ, ಕುಡಿಯೋದಕ್ಕೆ ನೀರಿಗಾಗಿ ಜಮೀನಿನಿನ ಡ್ರಮ್ ನಲ್ಲಿ ಸಗ್ರಹಿಸಿದ್ದನ್ನು ಕುಡಿದಿದ್ದಾರೆ. ಹೀಗಾಗಿ ಕ್ರಿಮಿನಾಶಕ ಸಿಂಪಡಿಸಲು ಇಟ್ಟಿದ್ದ ಡ್ರಮ್ ನಲ್ಲಿನ ನೀರು ಕುಡಿದ ಪರಿಣಾಣ ವಾಂತಿ, ಬೇಧಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.
ಕ್ರಿಮಿನಾಶಕ ಮಿಶ್ರಿತ ನೀರು ಕುಡಿದು ಅಸ್ವಸ್ಥಗೊಂಡಂತ ಜನರನ್ನು ಕೂಡಲೇ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ ಬಳಿಕ, ಪ್ರಾಣಾಪಾಯದಿಂದ ಪಾರಾಗಿರೋದಾಗಿ ತಿಳಿದು ಬಂದಿದೆ.