ಗದಗ : ಸಿ.ಟಿ ರವಿಯದ್ದು ವಿನಾಶಕಾರಿ ಬುದ್ಧಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಸಲೀಮ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಲೀಮ್ ಅಹ್ಮದ್ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಆದರೆ ಸಿಟಿ ರವಿ ಅವರು, ಶಾಂತಿ ನೆಮ್ಮದಿಯ ವಿರುದ್ಧದ ಹೇಳಿಕೆ ಮಾಡುತ್ತಿದ್ದಾರೆ. .ಟಿ ರವಿಯದ್ದು ವಿನಾಶಕಾರಿ ಬುದ್ಧಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಸಲೀಮ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಸಿಟಿ ರವಿಯವರಿಗೆ ಇಂಥ ಮಾತುಗಳು ಶೋಭೆ ತರಲ್ಲ ಎಂದು ಸಲೀಮ್ ಅಹ್ಮದ್ ಹೇಳಿದರು.
ಸಿದ್ರಾಮುಲ್ಲಾಖಾನ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆಯಾಗುತ್ತವೆ. ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಎಂದು ಜನರೇ ಹೆಸರಿಟ್ಟಿದ್ದಾರೆ ಎಂದು ಶಾಸಕ ಸಿ.ಟಿ. ರವಿ ಹೇಳಿಕೆ ನೀಡಿದ್ದರು.ಇಂದು ಈ ಹೇಳಿಕೆಗೆ ಸಿ ಟಿ ರವಿ ಸಮರ್ಥನೆ ನೀಡಿದ್ದು, ಸಿದ್ದರಾಮಯ್ಯಗೆ ಸಿದ್ರಾಮುಲ್ಲಾಖಾನ್ ಎಂದು ನಾನಷ್ಟೇ ಹೇಳಿಲ್ಲ, ಈ ಹಿಂದೆ ಈಶ್ವರಪ್ಪ ಕೂಡ ಹೇಳಿದ್ದರು. ಸಿದ್ದರಾಮಯ್ಯರಿಗೆ ಟಿಪ್ಪು ಸುಲ್ತಾನ್, ಟಿಪ್ಪು ಟೋಪಿ ಪ್ರಿಯವಾದುದು ಅಲ್ಲವೇ, ಅದಕ್ಕೆ ಹಾಗೆ ಹೇಳಿದೆ ಎಂದಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಸದ್ಭಾವನೆಯಿಂದ ಬಂದರೆ ಅತಿಥಿಗಳು ಎಂದು ನಾವು ಭಾವಿಸುತ್ತೇವೆ, ಆದರೆ ದರ್ಪದಿಂದ ಬಂದರೆ ಅದೇ ಭಾವನೆಯಿಂದ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಿ.ಟಿ.ರವಿ, ಸಿದ್ರಾಮುಲ್ಲಾ ಖಾನ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆಗಳಾಗುತ್ತವೆ. ಸಿದ್ರಾಮುಲ್ಲಾ ಖಾನ್ ಎಂದು ನಾನು ಹೆಸರಿಟ್ಟಿಲ್ಲ. ಜನರೇ ಹೆಸರಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದರು.
BREAKING NEWS : ಕ್ರಿಮಿನಾಶಕ ಮಿಶ್ರಿತ ನೀರು ಕುಡಿದು ಮಕ್ಕಳು ಸೇರಿ 15 ಮಂದಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು