ಭೋಪಾಲ್: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭಾರತ್ ಜೋಡೋ ಯಾತ್ರೆಯಲ್ಲಿ ಬಿದ್ದು ಕೈ ಮುರಿದುಕೊಂಡಿದ್ದಾರೆ.
BIGG NEWS: ಡಿಜಿಟಲ್ ಮೀಟರ್ ಅಳವಡಿಸಿದ ಬೆಸ್ಕಾಂ; ಹೊಸ ಮೀಟರ್ನಲ್ಲಿ ದುಪ್ಪಟ್ಟು ಬಿಲ್
ಮಧ್ಯಪ್ರದೇಶದ ಇಂದೋರ್ನಲ್ಲಿ ಯಾತ್ರೆ ಸಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿ ವೇಣುಗೋಪಾಲ್ರನ್ನು ತಳ್ಳಿಕೊಂಡು ಅಭಿಮಾನಿಗಳು ನುಗ್ಗಿದ್ದಾರೆ. ಈ ವೇ-ಳೆ ಬಿದ್ದ ವೇಣುಗೋಪಾಲ್ ಮೊಣಕಾಲು ಮತ್ತು ಕೈಗೆ ಗಾಯ ಮಾಡಿಕೊಂಡಿದ್ದಾರೆ. ಬಳಿಕ ವೈದ್ಯರು ಪರೀಕ್ಷಿಸಿದಾಗ ಕೈ ಮೂಳೆ ಫ್ಯಾಕ್ಚರ್ ಆಗಿರುವ ಬಗ್ಗೆ ತಿಳಿದುಬಂದಿದೆ.
BIGG NEWS: ಡಿಜಿಟಲ್ ಮೀಟರ್ ಅಳವಡಿಸಿದ ಬೆಸ್ಕಾಂ; ಹೊಸ ಮೀಟರ್ನಲ್ಲಿ ದುಪ್ಪಟ್ಟು ಬಿಲ್
ಕೂಡಲೇ ವೈದ್ಯರ ತಂಡ ನಿಗಾ ವಹಿಸಿದ್ದು, ಚಿಕಿತ್ಸೆ ನೀಡಿದೆ. ಅಭಿಮಾನಿಗಳ ಗುಂಪನ್ನು ಪೊಲೀಸರು ನಿಯಂತ್ರಿಸಲು ವಿಫಲವಾದ ಹಿನ್ನೆಲೆ ಈ ಘಟನೆ ನಡೆದಿದೆ.
BIGG NEWS: ಡಿಜಿಟಲ್ ಮೀಟರ್ ಅಳವಡಿಸಿದ ಬೆಸ್ಕಾಂ; ಹೊಸ ಮೀಟರ್ನಲ್ಲಿ ದುಪ್ಪಟ್ಟು ಬಿಲ್
ನಿನ್ನೆ ಕೆ.ಸಿ ವೇಣುಗೋಪಾಲ್ ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಬಿಜೆಪಿ ದೇಶದಲ್ಲಿ ಸುಳ್ಳು ರಾಜಕಾರಣ ಮಾಡುತ್ತಿದೆ. ನಮ್ಮ ನಾಯಕ ರಾಹುಲ್ ಗಾಂಧಿ ವಿರುದ್ಧ ಅಪಪ್ರಚಾರ ಮಾಡಿ ಅವರ ವರ್ಚಸ್ಸನ್ನು ಹಾಳು ಮಾಡಿತ್ತು. ಇದೀಗ ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್ ಗಾಂಧಿ ಏನೆಂದು ತೋರಿಸಿಕೊಟ್ಟಿದ್ದಾರೆ ಎಂದಿದ್ದರು