ಬೆಂಗಳೂರು: ದೇಶದ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಏರೋಇಂಡಿಯಾ -2023 ( AeroIndia-2023 ) ಫೆಬ್ರವರಿ 13, 2023 ರಿಂದ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ( Air Force Station in Bengaluru ) ಪ್ರಾರಂಭವಾಗಲಿದೆ ಎಂದು ರಕ್ಷಣಾ ಸಚಿವಾಲಯ ( Ministry of Defence ) ತಿಳಿಸಿದೆ.
ವಂದೇ ಮಾತರಂ ಹಾಡಿಗೆ ವಿರೋಧ: ಸಿದ್ಧರಾಮಯ್ಯ ಕ್ಷಮೆ ಕೇಳಬೇಕು – ಬಿಜೆಪಿ ಒತ್ತಾಯ
ಈ ಕುರಿತು ಟ್ವೀಟ್ ಮಾಡಿರುವ ಡಿಫೆನ್ಸ್ ಪ್ರೊಡಕ್ಷನ್ ಇಂಡಿಯಾ, “ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವನ್ನು #AeroIndia2023 ಘೋಷಿಸಲಾಗಿದೆ. ದಿನಾಂಕಗಳನ್ನು 2023 ರ ಫೆಬ್ರವರಿ 13-17 ರಂದು ದ್ವೈವಾರ್ಷಿಕ ವೈಮಾನಿಕ ಪ್ರದರ್ಶನವು ಕರ್ನಾಟಕದ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
Asia’s Biggest Air Show #𝐀𝐞𝐫𝐨𝐈𝐧𝐝𝐢𝐚𝟐𝟎𝟐𝟑
announced𝐒𝐚𝐯𝐞 𝐭𝐡𝐞 𝐝𝐚𝐭𝐞𝐬 ~ 𝟏𝟑𝐭𝐡-𝟏𝟕𝐭𝐡 𝐅𝐞𝐛𝐫𝐮𝐚𝐫𝐲 𝟐𝟎𝟐𝟑
The biennial airshow will be held at Air Force Station, Yelahanka, Bengaluru, KarnatakaFor more details: https://t.co/exUcJ7HjDp pic.twitter.com/5EvqS3y3Gh
— Defence Production India (@DefProdnIndia) November 27, 2022
ಇದು ಏರೋ ಇಂಡಿಯಾದ 14ನೇ ಆವೃತ್ತಿಯಾಗಿದೆ. ಹಿಂದಿನ ವರ್ಷದಂತೆ, ರಕ್ಷಣಾ ಸಚಿವಾಲಯವು ಏರ್ ಶೋನ ದಿನಾಂಕಗಳನ್ನು ಈಗ ಮುಂಚಿತವಾಗಿಯೇ ಘೋಷಿಸಿದೆ.