ಉಡುಪಿ: ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯಿದ್ದಂತ ಶಿಕ್ಷಕನೊಬ್ಬ, ವಿದ್ಯಾರ್ಥಿಗಳೊಂದಿಗೆ ನಡೆದುಕೊಂಡ ಈ ನಡೆ, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆ ಅಂತ ಮುಂದೆ ಓದಿ.
ಚಿತ್ರದುರ್ಗ ಜಿಲ್ಲೆಯ ಹುಣಸೆಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ವಿವಿಧ ಪ್ರವಾಸಿ ತಾಣಕ್ಕೆ ಕರೆದೊಯ್ಯಲಾಗಿತ್ತು. ಉಡುಪಿಯ ಆನೆಗುಡ್ಡ ವಿನಾಯಕ ದೇವಸ್ಥಾನಕ್ಕೆ ತೆರಳಿದ್ದಂತ ವೇಳೆಯಲ್ಲಿ ವಿದ್ಯಾರ್ಥಿಗಳು ಐದು ನಿಮಿಷ ತಡವಾಗಿ ಬಂದಿದ್ದರು.
ವಂದೇ ಮಾತರಂ ಹಾಡಿಗೆ ವಿರೋಧ: ಸಿದ್ಧರಾಮಯ್ಯ ಕ್ಷಮೆ ಕೇಳಬೇಕು – ಬಿಜೆಪಿ ಒತ್ತಾಯ
ವಿದ್ಯಾರ್ಥಿಗಳು ಬರುವುದನ್ನೇ ಕಾದು ರುದ್ರಾವತಾರಿಯಾಗಿ ಕಾಯುತ್ತಿದ್ದಂತ ಶಿಕ್ಷಕನೋರ್ವ, ಸಾರ್ವಜನಿಕವಾಗಿ ಕೋಲಿನಿಂದ ಮನಬಂದಂತೆ ಹೊಡೆದಿದ್ದಾನೆ. ಸಾರ್ವಜನಿಕವಾಗಿ ವಿದ್ಯಾರ್ಥಿಗಳನ್ನು ಮನಬಂದಂತೆ ಬೆತ್ತದಿಂದ ಥಳಿಸುತ್ತಿದ್ದನ್ನು ಕಂಡ ಸ್ಥಳೀಯರು ಆಕ್ಷೇಪಿಸಿದ್ದಾರೆ.
BIG NEWS: 2023ರ ವಿಧಾನಸಭಾ ಚುನಾವಣೆಗೆ JDS ಅಭ್ಯರ್ಥಿಗಳ ಲೀಸ್ಟ್ ರೆಡಿ ಇದೆ, ಬಿಡುಗಡೆ ಬಾಕಿ – ಸಿ.ಎಂ ಇಬ್ರಾಹಿಂ
ವಿದ್ಯಾರ್ಥಿಗಳನ್ನು ಯಾಕೆ ಹಾಗೆ ಹೊಡೆಯುತ್ತೀರಿ. ಇದು ಸರಿಯಲ್ಲ, ಮಕ್ಕಳಿಗೆ ಹೊಡೆಯಬೇಡಿ ಎಂಬುದಾಗಿ ಆಕ್ಷೇಪಿಸಿದ್ದಾರೆ. ಆದ್ರೇ ಶಿಕ್ಷಕ ಮಾತ್ರ ಸ್ಥಳೀಯರು ಸೇರಿದಂತೆ, ಪ್ರವಾಸಿಗರಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೂ, ವಿದ್ಯಾರ್ಥಿಗಳನ್ನು ಮನಬಂದಂತೆ ಬೆತ್ತದಿಂದ ಹೊಡೆದ ಶಿಕ್ಷಕನ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಒತ್ತಾಯಿಸಿದ್ದಾರೆ.