ವಿಜಯಪುರ: ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಗಾಗಿ ( Karnataka Assembly Election 2023 ) ರಾಜಕೀಯ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಜೆಡಿಎಸ್ ಪಕ್ಷದಿಂದ ( JDS Party ) ಪಂಚರತ್ನ ರಥಯಾತ್ರೆ ನಡೆಸುತ್ತಿದ್ದರೇ, ಬಿಜೆಪಿಯಿಂದ ಜನಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ. ಈ ನಡುವೆ 2023ರ ಚುನಾವಣೆಗೆ ಜೆಡಿಎಲ್ ಅಭ್ಯರ್ಥಿಗಳ ಲೀಸ್ಟ್ ರೆಡಿ ಇದೆ, ಬಿಡುಗಡೆ ಮಾತ್ರ ಬಾಕಿ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ( JDS State President CM Ibrahim ) ಹೇಳಿದ್ದಾರೆ.
ಒಂದೇ ವರ್ಷದಲ್ಲಿ 8000 ವಿವೇಕ ಶಾಲಾ ಕೊಠಡಿಗಳ ನಿರ್ಮಾಣ – ಸಿಎಂ ಬಸವರಾಜ ಬೊಮ್ಮಾಯಿ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನ 70 ರಿಂದ 80 ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧವಿದೆ. ಪಟ್ಟಿ ಬಿಡುಗಡೆ ಕುರಿತು ನಮ್ಮ ಗುರುಗಳು ಹೆಚ್ ಡಿ ರೇವಣ್ಣ ಹೇಳಬೇಕು ಅಂತ ತಿಳಿಸಿದ್ದಾರೆ.
ಯಾರದ್ದೋ ದುಡ್ಡು, ಸಿದ್ದರಾಮಯ್ಯನ ಜಾತ್ರೆ: ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ
ಈಗಾಗಲೇ ಜೆಡಿಎಸ್ ಪಕ್ಷದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಕೆಲ ಕ್ಷೇತ್ರಗಳಿಂದ ಕಣಕ್ಕೆ ಇಳಿಯಲಿರುವಂತ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಈ ಬಳಿಕ ಚುನಾವಣೆಗೆ ಕಣಕ್ಕಿಳಿಯಲಿರುವಂತ ಜೆಡಿಎಸ್ ನ 70 ರಿಂದ 80ರ ಮೊದಲ ಪಟ್ಟಿ ಕೂಡ ಸಿದ್ಧವಿರೋದಾಗಿ ಈಗ ಪಕ್ಷದ ಅಧ್ಯಕ್ಷರೇ ತಿಳಿಸಿದ್ದಾರೆ.