ಬೆಂಗಳೂರು: ಗೃಹ ರಕ್ಷಕದಳ ( Home Guard ) ಅಂದ್ರೇ ಶಿಸ್ತಿಗೆ ಹೆಸರಾಗಿರುವಂತ ಪಡೆಯಾಗಿದೆ. ಇಂತಹ ಗೃಹ ರಕ್ಷಕರ ಅಶಿಸ್ತನ್ನು ಸಹಿಸಲಾಗದು. ಈ ಕಾರಣದಿಂದ ಅವರನ್ನು ನೋಟಿಸ್ ನೀಡದೆಯೂ ಅಮಾನತುಗೊಳಿಸಬಹುದಾಗಿ ಎಂಬುದಾಗಿ ಕರ್ನಾಟಕ ಹೈಕೋರ್ಟ್ ( Karnataka High Court ) ಅಭಿಪ್ರಾಯ ಪಟ್ಟಿದೆ.
ಸರ್ ರೈತರ ಸಾಲಮನ್ನಾ ಮಾಡುವಿರಾ.? ಏಯ್ ನೆಕ್ಸ್ಟ್ ಪ್ರಶ್ನೆ ಕೇಳಪ್ಪ: ಸಿಎಂ ಬೊಮ್ಮಾಯಿ ಉತ್ತರ
ಈ ಸಂಬಂಧ ಬೆಂಗಳೂರಿನ ಲಗ್ಗೆರೆಯ ಡಿ.ಇ ಕೆಂಪಾಮಣಿ ಎಂಬಂತ ಗೃಹ ರಕ್ಷಕರೊಬ್ಬರು, ಅಮಾನತು ಆದೇಶವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರನ್ನೊಳಗೊಂಡಂತ ಏಕಸದಸ್ಯ ನ್ಯಾಯಪೀಠವು, ಗೃಹ ರಕ್ಷಕ ಸಿಬ್ಬಂದಿ ಶಿಸ್ತಿಗೆ ಹೆಸರುವಾಸಿಯಾದಂತ ಪಡೆಯಾಗಿದೆ. ಇಂತಹ ಪಡೆಯ ಸಿಬ್ಬಂದಿಗಳ ಅಶಿಸ್ತು ಸಹಿಸಲಾಗದು ಎಂದರು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಸಂವಿಧಾನದ ಪ್ರತಿ ಹಂಚಿಕೆ – ಸಿಎಂ ಬೊಮ್ಮಾಯಿ
ಗೃಹ ರಕ್ಷಕ ದಳದ ಸಿಬ್ಬಂದಿಗಳ ಅಮಾನತು ಎಂಬುದು ಶಿಕ್ಷೆಯಲ್ಲ, ಅದೊಂದು ತಾತ್ಕಾಲಿಕ ಕ್ರಮವಾಗಿದೆ. ಅಮಾನತಿನ ಬಳಿಕ ತನಿಖೆಯನ್ನು ಎದುರಿಸಬೇಕಾಗಿದೆ. ಹೀಗಾಗಿ ಅಶಿಸ್ತಿನ ಕಾರಣದಿಂದ ಡಿ.ಇ ಕೆಂಪಾಮಣಿಯನ್ನು ಡಿಜಿಪಿ ಅಮಾನತುಗೊಳಿಸಿ ಹೊರಡಿಸಿದ್ದಂತ ಆದೇಶ ಸಮಂಜಸವಾಗಿದೆ. ಇದರಲ್ಲಿ ನಾವು ಹಸ್ತಕ್ಷೇಪ ಮಾಡಲಾಗದು ಎಂದು ತಿಳಿಸಿದರು.
ಚಿಲುಮೆ ಸಂಸ್ಥೆಯನ್ನು ನೇಮಕ ಮಾಡಿಕೊಂಡಿದ್ದೇ ಸಿದ್ಧರಾಮಯ್ಯ ಸರ್ಕಾರ: ಟ್ವಿಟ್ಟರ್ ನಲ್ಲಿ ಬಿಜೆಪಿ ಕುಟುಕು
ಗೃಹ ರಕ್ಷಕ ದಳದ ಡಿಜಿಪಿ ಅವರು, ಕರ್ನಾಟಕ ಗೃಹ ರಕ್ಷಕ ಸಿಬ್ಬಂದಿ ನಿಯಮ 1963ರ ಸೆಕ್ಷನ್ 14ಬಿ ಅಡಿಯಲ್ಲಿ ಅಮಾನತುಗೊಳಿಸುವಂತ ಅಧಿಕಾರವಿದೆ. ಇದನ್ನು ಬಳಸಿಕೊಂಡೇ ಅವರು ಅಮಾನತು ಆದೇಶವನ್ನು ಹೊರಡಿಸಿದ್ದಾರೆ. ಈ ಅಮಾನತು ಆದೇಶಕ್ಕೂ ಮುನ್ನಾ ನೋಟಿಸ್ ನೀಡುವ ಅಗತ್ಯವಿಲ್ಲ ಎಂಬುದಾಗಿ ಹೈಕೋರ್ಟ್ ನ್ಯಾಯಪೀಠವು ಆದೇಶದಲ್ಲಿ ವಿವರಿಸಿದ್ದಾರೆ.
ಸರ್ ರೈತರ ಸಾಲಮನ್ನಾ ಮಾಡುವಿರಾ.? ಏಯ್ ನೆಕ್ಸ್ಟ್ ಪ್ರಶ್ನೆ ಕೇಳಪ್ಪ: ಸಿಎಂ ಬೊಮ್ಮಾಯಿ ಉತ್ತರ