ಚಿತ್ರದುರ್ಗ: ಮುರುಘಾ ಶ್ರೀ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಒಡನಾಡಿ ಸಂಸ್ಥೆಯ ಪರಶುರಾಂ ಸ್ಪೋಟಕ ಹೇಳಿಕೆ ನೀಡಿದ್ದು, ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣದಿಂದ ಹಿಂದೆ ಸರಿಯುವಂತೆ ಮೂರು ಕೋಟಿ ರೂಪಾಯಿ ಆಮಿಷ ಒಡ್ಡಲಾಗಿತ್ತು ಎಂದು ಹೇಳಿದ್ದಾರೆ.
ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಿನ್ನೆ(ನ.25) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪರಶುರಾಂ ‘ಪೋಕ್ಸೋ ಪ್ರಕರಣದಿಂದ ಹಿಂದೆ ಸರಿಯುವಂತೆ ಮೂರು ಕೋಟಿ ರೂಪಾಯಿ ಆಮಿಷ ಒಡ್ಡಲಾಗಿತ್ತು, ಸಚಿವರೊಬ್ಬರು ಸ್ವಾಮೀಜಿಯವರನ್ನು ಬಿಟ್ಟುಬಿಡಿ ಎಂದು ನಮಗೆ ಹೇಳಿದ್ದರು’ ಎಂದು ಪರಶುರಾಂ ಗಂಭೀರ ಆರೋಪ ಮಾಡಿದ್ದಾರೆ.
ಇನ್ನೂ, ಪೋಸ್ಕೋ ಪ್ರಕರಣದಲ್ಲಿ ಅರೋಪಿಗಳಾಗಿರುವ ಮುರುಘಾ ಶ್ರೀ ಸೇರಿದಂತೆ ಮೂವರ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಸ್ಥಳೀಯ ನ್ಯಾಯಾಲಯ ವಿಸ್ತರಣೆ ಮಾಡಿದೆ.
ನಿನ್ನೆ ಮೂವರ ಕಸ್ಟಡಿ ಅವಧಿ ಅಂತ್ಯವಾಗಿತ್ತು, ಹೀಗಾಗಿ ಆರೋಪಿಗಳ ಪರ ವಕೀಲರು ಜಾಮೀನಿನಾಗಿ ಅರ್ಜಿಯನ್ನು ಸಲ್ಲಿಸಿದ್ದರು, ಆದರೆ ಸಂತ್ರಸ್ಥ ಪರ ವಕೀಲರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೂವರ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 3ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶವನ್ನು ಹೊರಡಿಸಿದೆ. ಬಾಲಕಿಯರ ಮೇಲೆ ಅತ್ಯಾಚಾರ ಮಾಡಿರುವ ಆರೋಪವನ್ನು ಶಿವಮೂರ್ತಿ ಸ್ವಾಮಿಗಳ ಮೇಲಿದ್ದು, ಅವರಿಗೆ ಸಹಾಯ ಮಾಡಿದ ಆರೋಪ ಇತರರ ಮೇಲೆ ಇದೆ. ಸದ್ಯ ತನಿಖಾ ಅಧಿಕಾರಿಗಳು ಚಾರ್ಚ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದೇ ವೇಳೇ ಮುರುಘ ಶ್ರೀಗಳ ಎರಡನೇ ಪೋಸ್ಕೋ ಕೇಸ್ನ ಜಾಮೀನ ಅರ್ಜಿ ವಿಚಾರಣೆ ಇದೇ ನವೆಂಬರ್ 28 ರಂದು ನಡೆಯುಲಿದೆ ಅಂತ ತಿಳಿದು ಬಂದಿದೆ.
BIGG NEWS : ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಇಂದಿನಿಂದ `NIA’ ತನಿಖೆ ಆರಂಭ
ಇಂದು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಮಾಜಿ ಶಾಸಕ ‘ಶ್ರೀಶೈಲಪ್ಪ ಬಿದರೂರು’ ಅಂತ್ಯಕ್ರಿಯೆ