ಬೆಂಗಳೂರು : ಹಾಲು, ಹಾಲು ಉತ್ಪನ್ನಗಳ ಬೆಲೆ ಹೆಚ್ಚಾದ ಬಳಿಕ ಇದೀಗ ಟೀ, ಕಾಫಿ, ಉಪಹಾರದ ಬೆಲೆ ಕೂಡ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿಬಿದ್ದಿದೆ.
ಹೌದು, ರಾಜ್ಯದಲ್ಲಿ ನಂದಿನಿ ಹಾಲು, ಮೊಸರಿನ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಟೀ, ಕಾಫಿ, ಉಪಹಾರದ ಬೆಲೆ ಕೂಡ ಹೆಚ್ಚಳವಾಗಿದೆ.
ಇದುವರೆಗೆ 20 ರೂ ಇದ್ದ ಫುಲ್ ಕಾಫಿ, ಟೀ ಬೆಲೆಯು ಸದ್ಯ 1 ರಿಂದ 2 ರೂ ಹೆಚ್ಚಳವಾಗಿದ್ದು, ಸದ್ಯ 21 ರಿಂದ 22 ರೂ. ಹಣವನ್ನು ಗ್ರಾಹಕರಿಂದ ಪಡೆಯಲಾಗುತ್ತಿದೆ. ಅದೇ ರೀತಿ 10 ರೂ ಇದ್ದ ಬೈಟು ಕಾಫಿ ಹಾಗ ಟೀ ಬೆಲೆ 11 ರಿಂದ 12 ರೂಗೆ ಹೆಚ್ಚಳ ಮಾಡಲಾಗಿದೆ ಕೆಲವು ಕಡೆ 15 ರೂವರೆಗೆ ಕೂಡ ಏರಿಸಲಾಗಿದೆ. ಅದೇ ರೀತಿ ಹಾಲಿನ ಉತ್ಪನ್ನಗಳಿಂದ ತಯಾರಾಗುವ ಖಾದ್ಯ ಹಾಗೂ ಸಿಹಿ ತಿಂಡಿಯ ಬೆಲೆ ಶೇ 10 ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.
ಚಳಿ ಎಂದು ಹೋಟೆಲ್ ಗೆ ಕಾಫಿ , ಟೀ ಕುಡಿಯಲು ಹೋದರೆ ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಬೀಳಲಿದೆ. ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಹಾಲಿನ ಬೆಲೆ ಏರಿಕೆ ಕೂಡ ದೊಡ್ಡ ಪೆಟ್ಟು ಕೊಟ್ಟಿದೆ.
BIGG NEWS : 2022 ನೇ ಸಾಲಿನ `ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ’ ಪ್ರಕಟ : ಕರ್ನಾಟಕದ 7 ಕಲಾವಿದರಿಗೆ ಪ್ರಶಸ್ತಿ
‘ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ’ : ಗಡಿ ವಿವಾದ ಕೆದಕಿದ್ದ ಮಹಾನಾಯಕರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ