ತುಮಕೂರು: ಜಿಲ್ಲೆಯ ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕರ ನಡುವೆಗೆ ಬಿಗ್ ಫೈಟ್ ಶುರುವಾಗಿದೆ. ಅಲ್ಲದೇ ಹಾಲಿ ಶಾಸಕ ಡಿ.ಸಿಗೌರಿಶಂಕರ್ ಅವರಿಗೆ ಕೊಲೆ ಬೆದರಿಕೆ ಆರೋಪದಲ್ಲಿ, ಮಾಜಿ ಶಾಸಕ ಬಿ.ಸುರೇಶ್ ಗೌಡ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ
ಈ ಬಗ್ಗೆ ತುಮಕೂರು ಗ್ರಾಮಾಂತದ ಹೆಬ್ಬೂರು ಪೊಲೀಸ್ ಠಾಣೆಗೆ ತೆರಳಿ ಇಂದು ಹಾಲಿ ಶಾಸಕ ಡಿ.ಸಿ ಗೌರಿ ಶಂಕರ್, ಮಾಜಿ ಶಾಸಕ ಬಿ.ಸುರೇಶ್ ಗೌಡ ವಿರುದ್ಧ ದೂರು ನೀಡಿದ್ದಾರೆ. ಅವರು ನೀಡಿರುವಂತ ದೂರಿನಲ್ಲಿ, ದಿನಾಂಕ 18-11-2022ರಂದು ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಅರಿಯೂರು ಗ್ರಾಮದಲ್ಲಿನ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ನನ್ನ ಮೇಲೆ ಗಂಭೀರವಾಗ ಸುಳ್ಳು ಕೊಲೆ ಆರೋಪ ಮಾಡಿದ್ದಾರೆ ಎಂದಿದ್ದಾರೆ.
‘ನಟ ವಿದ್ಯಾಭರಣ್’ ಆಡಿಯೋ ವೈರಲ್ ವಿಚಾರ: ತನಿಖೆಗಾಗಿ ‘ಬೆಂಗಳೂರು ನಗರ ಪೊಲೀಸ್ ಕಮೀಷನರ್’ಗೆ ದೂರು
ಇನ್ನೂ ಕೊಲೆ ಮಾಡೋದಕ್ಕೆ ಜೈಲಿನಲ್ಲಿರುವಂತ ಸುಜಯ್ ಭಾರ್ಗವ್ ಎಂಬುವರಿಗೆ ಐದು ಕೋಟಿಗೆ ಸುಪಾರಿ ಕೊಟ್ಟಿದ್ದೀಯಾ, ನಿನ್ನಿಂದ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಮಾಜಿ ಶಾಸಕ ಬಿ.ಸುರೇಶ್ ಗೌಡ ಹೇಳಿಕೆ ನೀಡಿರುತ್ತಾರೆ. ಈ ಮೂಲಕ ಸುಳ್ಳು ಆರೋಪ ಮಾಡಿ ನನ್ನ ಘನತೆಗೆ ತೇಜೋವಧೆ ಮಾಡಿರುತ್ತಾರೆ ಎಂದು ಹೇಳಿದ್ದಾರೆ.
‘ಶರಾವತಿ ಸಂತ್ರಸ್ತ’ರಿಗೆ ತೊಂದರೆಯಾಗದಂತೆ ಕ್ರಮ – ಸಿಎಂ ಬಸವರಾಜ ಬೊಮ್ಮಾಯಿ
ನನ್ನನ್ನು ಮಾಜಿ ಶಾಸಕರು ಕೊಲೆ ಮಾಡಿಸುವ ಹುನ್ನಾರ ಮಾಡಿದ್ದಾರೆ ಎಂಬ ಅನುಮಾನ ಬರುತ್ತಿದೆ. ನನಗೆ ಮಾಜಿ ಶಾಸಕ ಬಿ.ಸುರೇಶ್ ಗೌಡರಿಂದ ಜೀವ ಭಯವಿರುತ್ತದೆ. ಅವರು ಯಾವಾಗಲಾದರೂ ಯಾವ ರೀತಿಯಲ್ಲಾದರೂ ಕೊಲೆ ಮಾಡಿಸಬಹುದೆಂಬ ಅನುಮಾನವಿರುತ್ತದೆ. ಈ ಬಗ್ಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಹೇಳಿಕೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ.