ಬೆಂಗಳೂರು: ಕೊರೋನಾ ಕಾರಣದಿಂದಾಗಿ ನಡೆಯದೇ ಇದ್ದಂತ ಚಿತ್ರಸಂತೆಯನ್ನು, ಈ ಬಾರಿ ನಡೆಸೋದಕ್ಕೆ ನಿರ್ಧಿಸಲಾಗಿದೆ. 20ನೇ ವರ್ಷದ ಚಿತ್ರ ಸಂತೆಯನ್ನು ಜನವರಿ 8, 2023ರಿಂದ ನಡೆಸೋದಕ್ಕೆ ದಿನಾಂಕ ನಿಗದಿಪಡಿಸಲಾಗಿದೆ.
BIGG NEWS: ಆನ್ ಲೈನ್ ಪರಿಶೀಲನೆ ಇಲ್ಲದೆ ಆಧಾರ್ ಬಳಸಬಾರದು : UIDAI ಸೂಚನೆ
ಈ ಬಗ್ಗೆ ಮಾಹಿತಿ ನೀಡಿದಂತ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್ ಅವರು, ಜನವರಿ 8, 2023ರಿಂದ 20ನೇ ಚಿತ್ರಸಂತೆ ನಡೆಸೋದಕ್ಕೆ ನಿರ್ಧರಿಸಲಾಗಿದೆ. ಈ ಬಾರಿ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಭೌತಿಕವಾಗಿ ಅಲ್ಲದೇ ಆನ್ ಲೈನ್ ಚಿತ್ರಸಂತೆಗೂ ಈ ಬಾರಿ ಅವಕಾಶ ನೀಡಲಾಗಿದೆ ಎಂದರು.
BREAKING NEWS: ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೋಧಕ ಸಿಬ್ಬಂದಿ’ಗಳ ವರ್ಗಾವಣೆಗೆ ‘ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್’
ಈ ಬಾರಿ ಚಿತ್ರಸಂತೆಗೆ ಹಲವು ರಾಜ್ಯಗಳಿಂದ ಕಲಾವಿಧರು ಆಗಮಿಸಲಿದ್ದಾರೆ. 20ನೇ ವರ್ಷದ ಚಿತ್ರಸಂತೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ರೇ, ಸಿಎನ್ ಅಶ್ವತ್ಥನಾರಾಯಣ ಅವರು ಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಪ್ಯಾರಾ ಮೆಡಿಕಲ್, ನಾನ್ ಪ್ಯಾರಾ ಮೆಡಿಕಲ್ ಸರ್ಟಿಫಿಕೇಟ್ ಕೋರ್ಸ್ ಗಾಗಿ ಅರ್ಜಿ ಆಹ್ವಾನ