ಕಾರವಾರ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ಘಟಕ ಎರಡು ದಿನದ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ. ಕರಾವಳಿಯ ಪ್ರೇಕ್ಷಣಿಯ ಸ್ಥಳಗಳ ದರ್ಶನ ಮಾಡುವವರು ಈ ಪ್ಯಾಕೇಜ್ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ಮಿಂಚಿನ ವೇಗದಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಫೈಲ್ ಕ್ಲಿಯರ್ : ಸುಪ್ರೀಂ ಕೋರ್ಟ್
ಶಿರಸಿ ಮತ್ತು ಕಾರವಾರದಿಂದ ಈ ಪ್ಯಾಕೇಜ್ ಟೂರ್ ಸೇವೆ ಲಭ್ಯವಿದೆ. ‘ಕರಾವಳಿ ದೇವಸ್ಥಾನಗಳ ಮತ್ತು ಧರ್ಮಸ್ಥಳ ದರ್ಶನ’ ಎಂದು ಎರಡು ದಿನಗಳ ಪ್ಯಾಕೇಜ ಟೂರ್ಗೆ ಹೆಸರು ಇಡಲಾಗಿದೆ. ಪ್ರತಿ ಶನಿವಾರ ಈ ಟೂರ್ ಆರಂಭವಾಗಲಿದೆ.
ಮಿಂಚಿನ ವೇಗದಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಫೈಲ್ ಕ್ಲಿಯರ್ : ಸುಪ್ರೀಂ ಕೋರ್ಟ್
ಶಿರಸಿ ಹಾಗೂ ಕಾರವಾರದಿಂದ ಕೊಲ್ಲೂರು-ಉಡುಪಿ-ಧರ್ಮಸ್ಥಳ-ಸುಬ್ರಹ್ಮಣ್ಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಈ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ ಮಾಡಲಾಗಿದೆ. ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಸಹ ಟಿಕೆಟ್ ಬುಕ್ ಮಾಡಬಹುದಾಗಿದೆ.
ಪ್ಯಾಕೇಜ್ ವಿವರಗಳು; ಶಿರಸಿ-ಕೊಲ್ಲೂರು-ಉಡುಪಿ-ಧರ್ಮಸ್ಥಳ-ಸುಬ್ರಮಣ್ಯದ ಎರಡು ದಿನದ ಪ್ಯಾಕೇಜ್ ಪ್ರತಿ ಶನಿವಾರ ಆರಂಭವಾಗಲಿದೆ. ವಯಸ್ಕರಿಗೆ ಪ್ರಯಾಣ ದರ 800 ರೂ. ಮತ್ತು ಮಕ್ಕಳಿಗೆ 600 ರೂ. ಆಗಿದೆ. (12 ವರ್ಷದೊಳಗಿನ). ಊಟ, ಉಪಹಾರ ವೆಚ್ಚ, ದೇವಾಲಯ ಪ್ರವೇಶ ಶುಲ್ಕ ಪೂಜಾ ಖರ್ಚು ಹೊರತುಪಡಿಸಿ ದರ ನಿಗದಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ವೇಳಾಪಟ್ಟಿ;
ಶಿರಸಿಯಿಂದ ಬಸ್ ಹೊರಡುವ ಸಮಯ 8 ಗಂಟೆ. ಶಿರಸಿ ನೂತನ ಬಸ್ ನಿಲ್ದಾಣ, ಐದು ರಸ್ತೆ ಸರ್ಕಲ್, ಮಂಜಗುಣಿ ಕ್ರಾಸ್, ಕುಮಟಾ ಬಸ್ ನಿಲ್ದಾಣದಲ್ಲಿ ಪಿಕ್ಅಪ್ ವ್ಯವಸ್ಥೆ ಇದೆ.
ಮಿಂಚಿನ ವೇಗದಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಫೈಲ್ ಕ್ಲಿಯರ್ : ಸುಪ್ರೀಂ ಕೋರ್ಟ್
ಕೊಲ್ಲೂರಿಗೆ ಬಸ್ ತಲುಪುವ ಸಮಯ 12 ಗಂಟೆ. ಹೊರಡುವ ಸಮಯ 13 ಗಂಟೆ. ಸ್ಥಳ ವೀಕ್ಷಿಸಲು ನಿಗದಿಪಡಿಸಿದ ಸಮಯ 1 ತಾಸು. ಶ್ರೀ ಮೂಕಾಂಬಿಕಾ ದೇವಾಲಯ ದರ್ಶನ & ಊಟ. ಉಡುಪಿ ತಲುಪುವ ಸಮಯ 15 ಗಂಟೆ, ಹೊರಡುವ ಸಮಯ 16 ಗಂಟೆ, ಸ್ಥಳ ವೀಕ್ಷಣೆ ಮಾಡಲು 1 ತಾಸು ಸಮಯ ನಿಗದಿಪಡಿಸಲಾಗಿದೆ. ದೇವಾಲಯ ದರ್ಶನ. ಧರ್ಮಸ್ಥಳ (ಮೊದಲ ದಿನ) ತಲುಪುವ ಸಮಯ 19. ದೇವಾಲಯ ದರ್ಶನ & ಊಟ ವಸತಿ (ಪ್ರಯಾಣಿಕರ ಖರ್ಚಿನಲ್ಲಿ). ಧರ್ಮಸ್ಥಳ (2ನೇ ದಿನ) ಹೊರಡುವ ಸಮಯ 10 ಗಂಟೆ.
ಮಿಂಚಿನ ವೇಗದಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಫೈಲ್ ಕ್ಲಿಯರ್ : ಸುಪ್ರೀಂ ಕೋರ್ಟ್
ಕುಕ್ಕೆ ಸುಬ್ರಮಣ್ಯ ತಲುಪುವ ಸಮಯ 11.30. ಹೊರಡುವ ಸಮಯ 13 ಗಂಟೆ, ಸ್ಥಳ ವೀಕ್ಷಣೆ ಮಾಡಲು ನಿಗದಿಪಡಿಸಿದ ಅವಧಿ 1.30 ತಾಸು. ಸುಬ್ರಮಣ್ಯ ದೇವಾಲಯ ದರ್ಶನ & ಊಟ. ಶಿರಸಿ ತಲುಪುವ ಸಮಯ 20 ಗಂಟೆ.
ಮಿಂಚಿನ ವೇಗದಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಫೈಲ್ ಕ್ಲಿಯರ್ : ಸುಪ್ರೀಂ ಕೋರ್ಟ್