ದೇವನಹಳ್ಳಿ: ಪೊಲೀಸ್ ಕಾನ್ಸ್ ಟೇಬಲ್ ಲಂಚ ಪೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
BIGG NEWS: ಕಾಂತಾರ ಸಿನಿಮಾದ ʼವರಾಹರೂಪಂʼ ವಿವಾದ; ಹೊಂಬಾಳೆ ಫಿಲ್ಮ್ಸ್ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಆಣೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಈ ವೇಳೆ ಕಾನ್ಸ್ ಟೇಬಲ್ ಚಂದ್ರಶೇಖರ್ ಸಿಕ್ಕಿಬಿದ್ದಿದ್ದಾನೆ.ಪ್ರಕರಣವನ್ನು ಕೈ ಬಿಡಲು ಮಂಜುನಾಥ್ ಎಂಬುವವರಿಂದ 30 ಸಾವಿರ ಲಂಚ ಪಡೆಯುತ್ತಿದ್ದ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಪೇದೆ ಚಂದ್ರಶೇಖರ್ ವಶಕ್ಕೆ ಪಡೆದಿದ್ದಾರೆ.
BIGG NEWS: ಕಾಂತಾರ ಸಿನಿಮಾದ ʼವರಾಹರೂಪಂʼ ವಿವಾದ; ಹೊಂಬಾಳೆ ಫಿಲ್ಮ್ಸ್ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
ಇನ್ನು ಮಂಜುನಾಥ್ ಹಾಗೂ ಆತನ ಸಹೋದರಿ ನಡುವೆ ಹಣಕಾಸು ವಿಚಾರವಾಗಿ ಗಲಾಟೆ ನಡೆದಿತ್ತು. ಮಂಜುನಾಥ್ ನನ್ನು ವಿಚಾರಣೆಗೆಂದು ಕರೆದು ಠಾಣೆಯಲ್ಲಿ ಸೆಲ್ ನಲ್ಲಿ ಕೂರಿಸಿದ್ದರು. ಬಿಡುಗಡೆ ಮಾಡಬೇಕು ಎಂದರೆ 3 ಲಕ್ಷ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ೩೦ ಸಾವಿರ ಮುಂಗಡವಾಗಿ ಪಡೆಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತರು ದಾಳಿ ನಡೆಸಿ ಬಂಧಿಸಿದ್ದಾರೆ.