ಭುವನೇಶ್ವರ(ಒಡಿಶಾ): ಕೇಂದ್ರಪಾರದ ಸದರ್ ಪಿಎಸ್ ವ್ಯಾಪ್ತಿಯ ಬಲಿಯಾ ಬಜಾರ್ನಲ್ಲಿ ಪಟಾಕಿ ಸಿಡಿಸುವ ಸ್ಪರ್ಧೆ ನಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಭುವನೇಶ್ವರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬಲಿಯಾ ಬಜಾರ್ನಲ್ಲಿರುವ ನಿಮಜ್ಜನ ಸ್ಥಳದಲ್ಲಿ ವಿವಿಧ ಪೂಜಾ ಪಂಡಲ್ಗಳ ನಡುವೆ ಪಟಾಕಿ ಸಿಡಿಸುವ ಸ್ಪರ್ಧೆ ಇತ್ತು ಏರ್ಪಡಿಸಲಾಗಿತ್ತು. ಈ ವೇಳೆ ಶೇಖರಿಸಿಟ್ಟಿದ್ದ ಪಟಾಕಿಗಳ ರಾಶಿಯ ಮೇಲೆ ಪಟಾಕಿಯ ಕಿಡಿ ಬಿದ್ದು ಜನರು ಗಾಯಗೊಂಡಿದ್ದಾರೆ.
Odisha | Over 30 people were injured in explosions that took place while a fireworks competition was underway during an immersion procession at Balia Bazaar within Sadar PS in Kendrapara. All injured were admitted to Kendrapara District HQ Hospital: Amrut Rituraja, DM Kendrapada pic.twitter.com/EzDr6H9LLL
— ANI (@ANI) November 23, 2022
ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸುಟ್ಟ ರೋಗಿಗಳ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BREAKING NEWS: ಬಿಆರ್ಎಸ್ ಶಾಸಕರ ಖರೀದಿ ಪ್ರಕರಣ: ಬಿ.ಎಲ್ ಸಂತೋಷ್ ಗೆ ಮತ್ತೆ ನೋಟಿಸ್